ಶಾಸಕರಾದ ಎನ್ ವೈ ಗೋಪಾಲಕೃಷ್ಣ ಹಾಗೂ ಚಿತ್ತದುರ್ಗ ಲೋಕಸಭಾ ಸದಸ್ಯರಾದ ಗೋವಿಂದ ಎಂ ಕಾರಜೋಳ ರವರಿಂದ ಪಟ್ಟಣಕ್ಕೆ ನೀರು ಸರಬರಾಜು ಮಾಡು ಅಮೃತ್2.0 ಯೋಜನೆಗೆ ಭೂಮಿ ಪೂಜೆ ನೆರವೇರಿಸಿದರು.
ಮೊಳಕಾಲ್ಮೂರು:ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದಮೇಲೆ ಇಡೀ ದೇಶದಲ್ಲಿ ಸುರಕ್ಷಿತವಾದ ಮತ್ತು ಶುದ್ಧವಾದ ಕುಡಿಯುವ ನೀರಿನ ಕೊಡುವ ಯೋಜನೆಗಳನ್ನು ಚಾಲನೆ ನೀಡಿದ್ದಾರೆ ಎಂದು ಗೋವಿಂದ ಎಂ ಕಾರಜೋಳರವರು ತಿಳಿಸಿದರು ಪಟ್ಟಣದ ಸಂತೆ ಮೈದಾನದಲ್ಲಿ ಕುಡಿಯುವ ನೀರಿನ ಅಮೃತ್ ಯೋಜನೆಯ ಉದ್ಘಾಟನೆ ಮಾಡಿ ಮಾತನಾಡಿದರು ಪ್ರತಿಯೊಂದು ಹಳ್ಳಿಗಳಲ್ಲಿ ಕುಡಿಯುವ ನೀರನ್ನು ಜಲಜೀವನ್ ಮಷೀನ್ ನ ಅಡಿಯಲ್ಲಿ ಕೊಡುವಂತ ವ್ಯವಸ್ಥೆ ಈಗ ಆಗುತ್ತಿದೆ ಅದೇ ರೀತಿ ಪಟ್ಟಣದಲ್ಲಿ ಕೂಡ ಅಮೃತ್ ಯೋಜನೆ ಅಡಿಯಲ್ಲಿ ಇಡೀ ದೇಶದ ತುಂಬಾ ಕುಡಿಯುವ ನೀರಿನ ಯೋಜನೆ ಮುಂಜೂರು ಮಾಡುತ್ತಿದ್ದಾರೆ ಅದೇ ರೀತಿ ಮೊಳಕಾಲ್ಮೂರು ಪಟ್ಟಣಕ್ಕೆ ಶುದ್ಧವಾದ ಕುಡಿಯುವ ನೀರನ್ನು ಪ್ರತಿ ಮನೆಮನೆಗೂ ತುಂಗಭದ್ರಾ ಜಲಾಶಯದಿಂದ ಕೊಡುವಂತಹ ಕೆಲಸ ಈ ಯೋಜನೆ 16 ಕೋಟಿ ವೆಚ್ಚದಲ್ಲಿ ಈಗಾಗಲೇ ಟೆಂಡರಾಗಿದೆ ಈ ದಿನ ಶಾಸಕರಾದ ಎನ್ ವೈ ಗೋಪಾಲಕೃಷ್ಣ ಮತ್ತು ನಾನು ಒಟ್ಟಿಗೆ ನೆರವೇರಿಸಿದ್ದೇವೆ ಎಂದರು.
ಈ ಯೋಜನೆಯು ಡಿಸೆಂಬರ್ ಒಳಗಡೆ ನೀರು ಹರಿಸುವ ಕೆಲಸವಾಗುತ್ತದೆ ಎಂದು ಎನ್ ವೈ ಗೋಪಾಲಕೃಷ್ಣರವರು ತಿಳಿಸಿದರು ಅದೇ ರೀತಿ 19 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯು ಕೂಡ ಪೂರ್ಣಗೊಳ್ಳುತ್ತದೆ ಎಂದರು.
ಕಾರ್ಯಕ್ರಮದ ಮುಂಚಿತವಾಗಿ ರೈತ ಸಂಘ ಮತ್ತು ವಿವಿಧ ಪರ ಸಂಘಟನೆಗಳು ಮೊಳಕಾಲ್ಮೂರು ಮತ್ತು ಚಳಕೆರೆ ತಾಲೂಕನ್ನು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಕಡೆಗಣಿಸಿದೆ ಎಂದು ಪ್ರತಿಭಟನೆ ಮಾಡಿದರು,
ರಾಜಕೀಯ ದುರುದ್ದೇಶದಿಂದ ನಮ್ಮ ತಾಲೂಕನ್ನು ಕಡೆಗಣಿಸಿದ್ದಾರೆ ಎಂದು ಬೇಡ ರೆಡ್ಡಿ ಹಳ್ಳಿಬಸವ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು. ಈ ಯೋಜನೆಯು ಅತಿ ಬೇಗನೆ ಪೂರ್ಣಗೊಳ್ಳಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರೂ.
ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯರಾದ ನವೀನ್ ಕೆ ಎಸ್, ಕಾಂಗ್ರೆಸ್ ಮುಖಂಡರಾದ ಎಸ್ ಖಾದರ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಲೀಮುಲ್ಲಾ ಮೊಳಕಾಲ್ಮುರು ಪಟ್ಟಣ ಪಂಚಾಯಿತಿಯ ಮುಖ್ಯ ಅಧಿಕಾರಿ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಅಧಿಕಾರಿಗಳು ಇನ್ನೂ ಹಲವರು ಉಪಸ್ಥಿತರಿದ್ದರು.
ವರದಿ: ಪಿ ಎಂ ಗಂಗಾಧರ