Ad imageAd image

ಮದುವೆ ಮನೆಯಲ್ಲಿ ಐಸ್ ಕ್ರೀಂ ಸೇವಿಸಿ 80 ಕ್ಕೂ ಹೆಚ್ಚು ಜನರು ಅಸ್ವಸ್ಥ

Bharath Vaibhav
WhatsApp Group Join Now
Telegram Group Join Now

ಚನ್ನಪಟ್ಟಣ : ಮದುವೆ ಊಟದ ನಂತರ ಐಸ್ ಕ್ರೀಂ ಸೇವಿಸಿ ಸುಮಾರು 80 ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿರುವ ಘಟನೆ ಚನ್ನಪಟ್ಟಣದಲ್ಲಿ ನಡೆದಿದೆ.

ಚನ್ನಪಟ್ಟಣದ ಸತನೂರು ಸರ್ಕಲ್ ಬಳಿ ಮದುವೆ ಸಮಾರಂಭದಲ್ಲಿ ಮದುವೆ ಊಟದ ನಂತರ ಅವಧಿ ಮುಗಿದ ಐಸ್ ಕ್ರೀಂ ಸೇವಿಸಿ 80 ಕ್ಕೂ ಹೆಚ್ಚು ಮಂದಿಗೆ ವಾಂತಿ ಭೇದಿ ಕಾಣಿಸಿಕೊಂಡು ತೀವ್ರ ಅಸ್ವಸ್ಥರಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಅಸ್ವಸ್ಥಗೊಂಡವರೆಲ್ಲ ಚನ್ನಪಟ್ಟಣದ ಯಾರಬ್ ನಗರ ಹಾಗೂ ಕೋಟೆ ನಿವಾಸಿಗಳಾಗಿದ್ದಾರೆ. ಅಸ್ವಸ್ಥರಲ್ಲಿ ೪೦ ಮಂದಿ ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ ಉಳಿದವರು ಮಂಡ್ಯ ಹಾಗೂ ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 

 

WhatsApp Group Join Now
Telegram Group Join Now
Share This Article
error: Content is protected !!