Ad imageAd image

ಆಪರೇಷನ್ ಸಿಂಧೂರ್’ ಗೆ ಪ್ರೇರಣೆ: 17 ನವಜಾತ ಹೆಣ್ಣುಮಕ್ಕಳಿಗೆ ‘ಸಿಂಧೂರ್’ ಹೆಸರು ನಾಮಕರಣ 

Bharath Vaibhav
ಆಪರೇಷನ್ ಸಿಂಧೂರ್’ ಗೆ ಪ್ರೇರಣೆ: 17 ನವಜಾತ ಹೆಣ್ಣುಮಕ್ಕಳಿಗೆ ‘ಸಿಂಧೂರ್’ ಹೆಸರು ನಾಮಕರಣ 
WhatsApp Group Join Now
Telegram Group Join Now

ಕುಶಿನಗರ: ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಸೇನೆ ಪಾಕಿಸ್ತಾನದ ಉಗ್ರರ ವಿರುದ್ಧ ‘ಆಪರೆಷನ್ ಸಿಂಧೂರ್’ ಕಾರ್ಯಾಚರಣೆ ಮೂಲಕ ತಿರುಗೇಟು ನೀಡಿದೆ. ಭಾರತೀಯ ಸೇನೆಯ ‘ಆಪರೇಷನ್ ಸಿಂಧೂರ್’ ಗೆ ಪ್ರೇರಣೆಗೊಂಡು 17 ನವಜಾತ ಹೆಣ್ಣುಮಕ್ಕಳಿಗೆ ‘ಸಿಂಧೂರ್’ ಹೆಸರನ್ನು ಇಡಲಾಗಿದೆ.

ಉತ್ತರ ಪ್ರದೇಶದ ಕುಶಿನಗರದಲ್ಲಿ ಹಲವು ಕುಟುಂಬಗಳು ತಮ್ಮ ಮಕ್ಕಳಿಗೆ ‘ಸಿಂಧೂರ್’ ಎಂದು ನಾಮಕರಣ ಮಾಡಿವೆ. ಮೇ 10 ಮತ್ತು 11ರಂದು ಕುಶಿನಗರದ ವೈದ್ಯಕೀಯ ಕಾಲೇಜಿನಲ್ಲಿ ಜನಿಸಿದ 17 ಹೆಣ್ಣುಮಕ್ಕಳಿಗೆ ಪೋಷಕರು ‘ಸಿಂಧೂರ್’ ಎಂದು ಹೆಸರಿಟ್ಟಿದ್ದಾರೆ. ಈ ಬಗ್ಗೆ ವೈದ್ಯಕೀಯ ಕಾಲೇಜು ಪ್ರಾಂಶುಪಾಲ ಡಾ.ಆರ್.ಕೆ.ಶಾಹಿ ತಿಳಿಸಿದ್ದಾರೆ.

ಏಪ್ರಿಲ್ 22ರಂದು ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರು ಪ್ರವಾಸಿಗರನ್ನು ಗುರಿಯಾಗಿಸಿ ನಡೆಸಿದ್ದ ಗುಂಡಿನ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ್ದರು. ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಮೇ 7ರಂದು ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ಉಗ್ರರ 9 ನೆಲೆಗಳನ್ನು ಧ್ವಂಸಗೊಳಿಸಿತ್ತು. ನೂರಕ್ಕೂ ಹೆಚ್ಚು ಭಯೋತ್ಪಾದಕರು ಸಾವನ್ನಪ್ಪಿದ್ದರು.

WhatsApp Group Join Now
Telegram Group Join Now
Share This Article
error: Content is protected !!