ಹರಾರೆ(ಜಿಂಬಾಬ್ವೆ): ಚೊಚ್ಚಲ ಪಂದ್ಯದ ಮೊದಲ ಎಸೆತದಲ್ಲಿಯೇ ವಿಕೆಟ್ ಪಡೆದ ವೇಗಿ ಮಯಾಂಕ ಯಾದವ್ ಈ ಸಾಧನೆ ಮಾಡಿದ ಭಾರತದ ಕೇವಲ ೩ ನೇ ಬೌಲರ್ ಎಂಬ ಗೌರವಕ್ಕೆ ಪಾತ್ರರಾದರು.
ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ಜಿಂಬಾಬ್ವೆ ವಿರುದ್ಧ ಇಲ್ಲಿ ನಡೆದ ಮೊದಲ ಟ್ವೆಂಟಿ-೨೦ ಪಂದ್ಯದಲ್ಲಿ ಮಯಾಂಕ್ ಯಾದವ್ ಬ್ರಿಯಾನ್ ಬೆನ್ನೆಟ್ ವಿಕೆಟ್ ಅನ್ನು ಪಂದ್ಯದ ಮೊದಲ ಓವರ್‌ನ ಮೊದಲ ಎಸೆತದಲ್ಲಿಯೇ ಪಡೆದರು.
ಇದಕ್ಕೆ ಮುನ್ನ ಅರ್ಷದೀಪ್ ಸಿಂಗ್ ಹಾಗೂ ಹಾರ್ಧಿಕ ಪಾಂಡ್ಯಾ ಟ್ವೆಂಟಿ-೨೦ ಚೊಚ್ಚಲ ಪಂದ್ಯದ ಮೊದಲ ಎಸೆತದಲ್ಲಿಯೇ ವಿಕೆಟ್ ಪಡೆದಿದ್ದರು.


