ನವದೆಹಲಿ: ಭಾರೀ ಮಳೆ ಹಾಗೂ ಬಿರುಗಾಳಿ ಧೂಳಿನಿಂದ ೩೩ ಜನರು ಅಸುನೀಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ೫ ಜಿಲ್ಲೆಗಳಲ್ಲಿ ಕಳೆದ ರಾತ್ರಿ ಭಾರೀ ಮಳೆಯಾಗಿದೆ. ಇದರ ಜೊತೆಗೆ ವ್ಯಾಪಕ ಬಿರುಗಾಳಿಯಿಂದಲೂ ಜನರು ಅಸ್ವಸ್ಥಗೊಂಡಿದ್ದಾರೆ. ಬಿರುಗಾಳಿಯಲ್ಲಿ ತೂರಿ ಬಂದ ಭಯಂಕರ ಧೂಳಿನಿಂದ ಜನ ಕಂಗಾಲಾದರು. ಒಟ್ಟು ಐದೂ ಜಿಲ್ಲೆಗಳಲ್ಲಿ ೩೩ ಜನರು ಮೃತಪಟ್ಟಿದ್ದಾರೆ.
ಘಟನೆಯ ಭೀಕರತೆಯನ್ನು ಮನಗಂಡಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ತಕ್ಷಣ ಪರಿಹಾರ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

