ನ್ಯೂ ಚಂದಿಗಢ: ವೈಭವ್ ಸರ‍್ಯವಂಶಿ ಆಟಕ್ಕೆ ದಾಖಲೆಗಳು ಉಡೀಸ್ ಆಗಿ ಎಲ್ಲ ದಾಖಲೆಗಳು ಕಿರಿಯ ಕ್ರಿಕೆಟಿಗನ ಹೆಗಲಿಗೆ ಬರುತ್ತಿವೆ. ಸನ್ ರೈಸರ್ಸ್ ವಿರುದ್ಧದ ಎಲಿಮಿನೆಟರ್ ಪಂದ್ಯದಲ್ಲಿ ೨೯ ಎಸೆತಗಳಲ್ಲಿ ೯೭ ರನ್‌ಗಳಿಸಿ ಔಟ್ ಆದ ವೈಭವ್ ಆಟಕ್ಕೆ ಪ್ರೇಕ್ಷಕರು ಪೀದಾ ಆದರು.
ಮೊದಲ ೧-೬ ಓವರ್ ವರೆಗೆ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಕೀರ್ತಿಗೂ ಸೂರ್ಯವಂಶಿ ಪಾತ್ರರಾದರು. ಇದಕ್ಕೆ ಮುನ್ನ ಜಯಸೂರ್ಯ, ಬ್ರಿಸ್ಟೋವ್, ಜೋಶ್ ಬಟ್ಲರ್. ಅಭಿಷೇಕ ಶರ್ಮಾ, ತಲಾ ೭ ಸಿಕ್ಸರ್ ಬಾರಿಸಿದ್ದು, ದಾಖಲೆಯಾಗಿತ್ತು.
ಮೊದಲ ೧-೬ ಓವರ್‌ವರೆಗೆ ೫೦ ಕ್ಕಿಂತ ಹೆಚ್ಚು ರನ್ ಗಳಿಸಿದ ಆಟಗಾರರಲ್ಲಿ ಮೂರನೇಯವರಾದರು. ಇದಕ್ಕೆ ಮುನ್ನ ಸುರೇಶ ರೈನಾ ೮೭ ಹಾಗೂ ಆಡಂ ಗಿಲ್‌ಕ್ರಿಸ್ಟ್ ೭೪ ರನ್‌ಗಳಿಸಿದ್ದರು.

