Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕ್ಷುಲ್ಲಕ ಕಾರಣಕ್ಕೆ 6 ತಿಂಗಳ ಮಗು ಸೇರಿ ಕುಟುಂಬ ಐವರ ಮೇಲೆ ಆಸಿಡ್ ದಾಳಿ

Advertisement

ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬ 6 ತಿಂಗಳ ಮಗು ಸೇರಿ ಕುಟುಂಬ ಐವರ ಮೇಲೆ ಆಸಿಡ್ ದಾಳಿ ನಡೆಸಿ ಅತ್ಟಹಾಸ ಮೆರೆದಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಹುಬ್ಬಳ್ಳಿಯ ತಾರಿಹಾಳ ವಾಜಪೇಯಿ ನಗರದಲ್ಲಿ ಈ ಘಟನೆ ನಡೆದಿದೆ. ನಾದಿನಿಯರ ಫೋಟೋ ಕ್ಲಿಕ್ಕಿಸಿದ ವಿಚಾರವಾಗಿ ಪತಿ-ಪತ್ನಿ ನಡುವೆ ಗಲಾಟೆ ಆರಂಭವಾಗಿದ್ದು, ಈ ವೇಳೆ ಕೋಪದ ಬರದಲ್ಲಿ ಪತಿ ಮಹಾಶಯ ಸ್ಥಳದಲ್ಲಿದ್ದ ಎಲ್ಲರ ಮೇಲೆ ಎಸಿಡ್ ಎರಚಿದ್ದಾನೆ.ಘಟನೆಯಲ್ಲಿ 6 ತಿಂಗಳ ಮಗು, ಪತ್ನಿ, ನಾದಿನಿಯರು ಸೇರಿ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಸುರೇಶ್ ಬೈಲ್ ಪತ್ತಾರ (33)ಎಂಬಾತ ಆಸಿಡ್ ಎರಚಿರುವ ಆರೋಪಿ. ರಾಜೇಶ್ವರಿ (24) ಅವರ ಸ್ಥಿತಿ ತೀವ್ರ ಗಂಭೀರವಾಗಿದೆ. 

6 ತಿಂಗಳ ಮಗುವಿನ ಮುಖ, ಬಾಯಿಗೂ ಆಸಿಡ್ ತಗುಲಿ ಗಾಯಗಳಾಗಿವೆ. ಶೃತಿ ಹಾಗೂ ರೇಷ್ಮಾ ಎಂಬುವವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಆಸಿಡ್ ಎರಚುವಾಗ ಸುರೇಶ್ ಗೂ ಆಸಿಡ್ ತಗುಲಿ ಗಾಯಗಲಾಗಿವೆ.

ನಾದಿನಿಯರ ಫೋಟೋ ವಿಚಾರವಾಗಿ ಸುರೇಶ್ ಹಾಗೂ ಪತ್ನು ರಾಜೇಶ್ವರಿ ನಡುವೆ ಜಗಳವಾಗಿತ್ತು. ರಾಜೇಶ್ವರಿ ಪತಿಗೆ ನಾದಿನಿಯರ ಫೋಟೋ ತೆಗೆಯದಮ್ತೆ ತಾಕೀತು ಮಾಡಿದ್ದಳು.

ಆದರೂ ಕೇಳದ ಪತಿ ಸುರೇಶ್ ನಾದಿನಿಯರ ಫೋಟೋ ಕ್ಲಿಕ್ಕಿಸಿ ಕಿರಿಕ್ ಮಾಡಿದ್ದ. ಇದೇ ವಿಚಾರವಾಗಿ ಪತಿ-ಪತ್ನಿ ಜಗಳ ವಿಕೋಪಕ್ಕೆ ತಿರುಗಿದೆ.

ತಾಮ್ರ, ಹಿತ್ತಾಳೆ ತೊಳೆಯಲು ಬಳಸುತ್ತಿದ್ದ ಕೆಮಿಕಲ್ ನಿಂದ ಸುರೇಶ್ ಐವರ ಮೇಲೆ ದಾಳಿ ನಡೆಸಿದ್ದಾನೆ. ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹುಬ್ಬಳ್ಳಿ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವರದಕ್ಷಿಣೆ ಕಿರುಕುಳ : ದೇಶದ 19 ಪ್ರಮುಖ ನಗರಗಳ ಪಟ್ಟಿಯಲ್ಲಿ ಬೆಂಗಳೂರಿಗೆ ಮೊದಲ ಸ್ಥಾನಸಂಪುಟ ಪುನಾರಚನೆ, ನಾಯಕತ್ವ ಬದಲಾವಣೆ ತಿಂಗಳಲ್ಲಿ ಬಗೆಹರಿಯುತ್ತದೆ : ಕೆ.ಹೆಚ್. ಮುನಿಯಪ್ಪ ಕ್ಷುಲ್ಲಕ ಕಾರಣಕ್ಕೆ 6 ತಿಂಗಳ ಮಗು ಸೇರಿ ಕುಟುಂಬ ಐವರ ಮೇಲೆ ಆಸಿಡ್ ದಾಳಿಕೈಗಾರಿಕೆ ಸ್ಥಾಪಿಸಲು ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ : ಕುಮಾರಣ್ಣ ಬೇಸರ98ರ ವೃದ್ಧನ ಕಾಲಿಗೆ ಬಿದ್ದ ನರೇಂದ್ರ ಮೋದಿ : ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಪಶ್ಚಿಮ ಬಂಗಾಳ ಪ್ರಿಯತಮನೊಂದಿಗೆ ಓಡಿಹೋಗಲು ಪತಿ ಮನೆಯಲ್ಲಿಯೇ ಕಳ್ಳತನ : ಇಬ್ಬರು ಅರೆಸ್ಟ್ಪಶ್ಚಿಮ ಬಂಗಾಳದ ಮೊದಲ ಬಿಜೆಪಿ ಸಿಎಂ ಆಗಿ ಸುವೇಂದು ಅಧಿಕಾರಿ ಪ್ರಮಾಣವಚನ ಸ್ವೀಕಾರ ಬಾಗಲಕೋಟೆ: ಜಿಲ್ಲಾ ಆಸ್ಪತ್ರೆಯಲ್ಲಿ ಹಿಂದೂ ಯುವತಿ ಮೇಲೆ ದೌರ್ಜನ್ಯ - ಆಕ್ರೋಶಯಾದಗಿರಿ ಲೋಕಾಯುಕ್ತದ 'ಮಿಂಚಿನ ದಾಳಿ': ಲಕ್ಷದ ಲಂಚದೊಂದಿಗೆ ಗುರುಮಠಕಲ್ ಪಿಐ ಅರೆಸ್ಟ್!ಸರ್ಕಾರಿ ಭೂಮಿ ಒತ್ತುವರಿ ತೆರವುಗೊಳಿಸಲು ಸುರೇಶ್ ನಾಯಕ ಒತ್ತಾಯ!