Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಆಟವಾಡುತ್ತಿದ್ದಾಗ ಬಾಲಕನ ಗಂಟಲಿನಲ್ಲಿ ಸಿಲುಕಿಕೊಂಡ ಕಬ್ಬಿಣದ ರಾಡ್ 

Advertisement

ಮಧ್ಯಪ್ರದೇಶ : ಮಧ್ಯಪ್ರದೇಶದ ಖಾರ್ಗೋನ್‌ ಜಿಲ್ಲೆಯಲ್ಲಿ ಅತ್ಯಂತ ಧೃತಿಗೆಡಿಸುವ ಮತ್ತು ಆಘಾತಕಾರಿ ಘಟನೆಯೊಂದು ಸಂಭವಿಸಿದೆ. ಇಲ್ಲಿನ ಬರ್ವಾದಲ್ಲಿರುವ ಸಿಐಎಸ್‌ಎಫ್‌ (CISF) ಆವರಣದಲ್ಲಿ ಆಟವಾಡುತ್ತಿದ್ದ 15 ವರ್ಷದ ಅಪ್ರಾಪ್ತ ಬಾಲಕನೊಬ್ಬ ಭೀಕರ ಅಪಘಾತಕ್ಕೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದಾನೆ.

ಶುಕ್ರವಾರ ತಡರಾತ್ರಿ ಈ ದುರದೃಷ್ಟಕರ ಘಟನೆ ಬೆಳಕಿಗೆ ಬಂದಿದ್ದು, ಸದ್ಯ ಬಾಲಕ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ.

ಲಭ್ಯವಿರುವ ಮಾಹಿತಿ ಪ್ರಕಾರ, ಬಾಲಕನು ಎಂದಿನಂತೆ ತನ್ನ ಸ್ನೇಹಿತರೊಂದಿಗೆ ಸಿಐಎಸ್‌ಎಫ್‌ ಆವರಣದಲ್ಲಿ ಆಟವಾಡುತ್ತಿದ್ದನು. ಆಟದ ಜೋಶ್‌ನಲ್ಲಿ ಬಾಲಕನು ತನ್ನ ಚಪ್ಪಲಿಯನ್ನು ಬೌಂಡರಿ ಗೋಡೆಯ ಆಚೆಗೆ ಎಸೆದಿದ್ದನು.

ಅದನ್ನು ಮರಳಿ ತರಲು ಸುಮಾರು 8 ಅಡಿ ಎತ್ತರದ ಬೌಂಡರಿ ಗೋಡೆಯನ್ನು ಹತ್ತಿ ಆಚೆ ಜಿಗಿದಿದ್ದಾನೆ. ಆದರೆ, ಚಪ್ಪಲಿ ತಗೆದುಕೊಂಡು ವಾಪಸ್ ಗೋಡೆ ಹತ್ತಿ ಬರುವಾಗ ವಿಧಿಯ ಆಟ ಬದಲಾಗಿದೆ.

ಬಾಲಕನು ಗೋಡೆ ಹತ್ತಿ ಹಿಂತಿರುಗುವಾಗ ಆಕಸ್ಮಿಕವಾಗಿ ಆತನ ಕಾಲು ಸಿಲುಕಿಕೊಂಡಿದೆ. ಪರಿಣಾಮವಾಗಿ ಆತ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದು, ಅದೇ ವೇಳೆ ಅಲ್ಲೇ ಸಮೀಪದಲ್ಲಿದ್ದ ಹರಿತವಾದ ಕಬ್ಬಿಣದ ರಾಡ್‌ ಆತನ ಗಂಟಲಿಗೆ ನೇರವಾಗಿ ನುಗ್ಗಿದೆ.

ಅಪಘಾತದ ತೀವ್ರತೆ ಎಷ್ಟಿತ್ತೆಂದರೆ, ಆ ಹರಿತವಾದ ರಾಡ್ ಗಂಟಲನ್ನು ಸೀಳಿ ಬಾಯಿಯ ಮೂಲಕ ಹೊರಬಂದಿದೆ. ಬಾಲಕನು ನೋವಿನಿಂದ ಕಿರುಚಾಡಲಾರಂಭಿಸಿದ್ದಾನೆ.

ಬಾಲಕನ ಕಿರುಚಾಟ ಹಾಗೂ ಪರಿಸ್ಥಿತಿಯನ್ನು ಗಮನಿಸಿದ ಸ್ಥಳೀಯ ನಿವಾಸಿಗಳು ತಕ್ಷಣವೇ ರಕ್ಷಣೆಗೆ ಧಾವಿಸಿದ್ದಾರೆ. ಕಬ್ಬಿಣದ ರಾಡ್ ಬಾಲಕನ ದೇಹದೊಳಗೆ ಸಿಲುಕಿಕೊಂಡಿದ್ದರಿಂದ ಆತನನ್ನು ತಕ್ಷಣವೇ ಹೊರತೆಗೆಯುವುದು ಅಸಾಧ್ಯವಾಗಿತ್ತು.

ಹೀಗಾಗಿ, ಸ್ಥಳೀಯರು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಕಠಿಣ ಪರಿಶ್ರಮ ಪಟ್ಟು, ಗ್ಯಾಸ್ ಕಟ್ಟರ್ ಯಂತ್ರದ ಸಹಾಯದಿಂದ ಅತ್ಯಂತ ಜಾಗರೂಕತೆಯಿಂದ ಕಬ್ಬಿಣದ ರಾಡ್ ಅನ್ನು ಕತ್ತರಿಸಿ ಬಾಲಕನನ್ನು ಮುಕ್ತಗೊಳಿಸಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಕಬ್ಬಿಣದ ರಾಡ್‌ನಿಂದ ಮುಕ್ತಗೊಳಿಸಲಾದ ಬಾಲಕನನ್ನು ತೀವ್ರ ರಕ್ತಸ್ರಾವದ ಸ್ಥಿತಿಯಲ್ಲಿಯೇ ಪೊಲೀಸರು ಮತ್ತು ಸ್ಥಳೀಯರು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸದ್ಯ ಬಾಲಕನ ಸ್ಥಿತಿ ಗಂಭೀರವಾಗಿದ್ದು, ಆತನ ಪ್ರಾಣ ಉಳಿಸಲು ವೈದ್ಯರು ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ. ಈ ಘಟನೆಯು ಸ್ಥಳೀಯ ವಲಯದಲ್ಲಿ ತೀವ್ರ ಕಳವಳ ಹಾಗೂ ರೇಜಿಗೆಯನ್ನು ಉಂಟುಮಾಡಿದೆ.

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
2000 - 2001 ಸಾಲಿನ ವಿದ್ಯಾರ್ಥಿಗಳ ಗುರುವಂದನ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮಫೀಪಾ ವಿಶ್ವಕಪ್ ಫುಟ್‌ಬಾಲ್: ಕೊನೆಯ ೧೬ ತಂಡಗಳ ಪಟ್ಟಿ ಸಿದ್ದಬಡವರ ಗುಡಿಸಲುಗಳಿಗೆ ಕೈ ಹಾಕಿದರೆ ಉಗ್ರ ಸ್ವರೂಪ ಪ್ರತಿಭಟನೆ ಖಚಿತ!ಸುರೇಶ ಗೊಬ್ಬರಕಲ್ದಲಿತ ಯುವಕನ ಮೇಲೆ ಅಮಾನುಷ ಹಲ್ಲೆ : ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ  ಶ್ರೀಶೈಲ ರತ್ನಾಕರ ಆಗ್ರಹಶಾಸಕ ಎಸ್.ಟಿ. ಸೋಮಶೇಖರ್ ರವರಿಗೆ ನಾವೆಲ್ಲ ಬಲಗೈ ಬಂಟರಂತೆ ಇದ್ದೇವೆ : ಟ್ರಾವೆಲ್ಸ್ ಮಂಜುನಾಥ್ಅಮಿತ್ ಶಾಗೆ ಉಪಪ್ರಧಾನಿ ಪಟ್ಟ : ಕೇಂದ್ರದಲ್ಲಿ ಸಂಪುಟ ಪುನಾರಚನೆ ಕಸರತ್ತು ಸನ್ನಡತೆಯ ಆಧಾರದ ಮೇಲೆ 24 ಕೈದಿಗಳಿಗೆ ಬಿಡುಗಡೆ ಭಾಗ್ಯ ಕೆ ಎಂ ಎಫ್  ದೇಶದಲ್ಲಿಯೇ ಅತ್ಯಂತ ಜನನುರಾಗಿ ಹಾಲಿನ ಉತ್ಪನ್ನಗಳು: ಶಾಸಕ ಬಾಬಾಸಾಹೇಬಸಾಯಿ ಸುದರ್ಶನ್ ಸಮಯೋಚಿತ ಶತಕಪತಿಯನ್ನು ಕೊಲೆ ಮಾಡಿ, ಮನೆಯ ಬಾತ್‌ರೂಂ ನೆಲದಡಿ ಶವ ಹೂತಿಟ್ಟ ಪಾಪಿ ಪತ್ನಿ