ಬ್ರಿಸ್ಟೋಲ್(ಇಂಗ್ಲೆAಡ್): ಇಂಗ್ಲೆAಡ್ ವಿರುದ್ಧ ಇಲ್ಲಿ ನಡೆದಿರುವ ನಾಲ್ಕನೇ ಟ್ವೆಂಟಿ-೨೦ ಪಂದ್ಯದಲ್ಲೂ ಭಾರತದ ಬಿಗ್ ಹಿಟರ್‌ಗಳ ವೈಫಲ್ಯ ಕಂಡರು.
ಇಲ್ಲಿನ ಕೌಂಟಿ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಇಳಿದ ಭಾರತ ಪರವಾಗಿ ವೈಭವ್ ಸೂರ್ಯವಂಶಿ, ಅಭಿಷೇಕ ಶರ್ಮಾ ಹಾಗೂ ಇಶಾನ್ ಕಿಶನ್ ಮತ್ತೇ ಬ್ಯಾಟಿಂಗ್‌ನಲ್ಲಿ ವಿಫಲರಾದರು.
ವೈಭವ್ ಸೂರ್ಯವಂಶಿ ೧೦ ಎಸೆತಗಳಲ್ಲಿ ೧ ಬೌಂಡರಿ, ೧ ಸಿಕ್ಸರ್ ನೆರವಿನಿಂದ ೧೫ ರನ್ ಮಾತ್ರಗಳಿಸಿ ಔಟಾದರು. ಅಭಿಷೇಕ ಶರ್ಮಾ ೧೪ ಎಸೆತಗಳಲ್ಲಿ ೧೬ (೨ ಬೌಂಡರಿ) ಬೇಗ ವಿಕೆಟ್ ಒಪ್ಪಿಸಿದರು. ಇಶಾನ್ ಕಿಶನ್ ೪ ರನ್‌ಗಳನ್ನು ಮಾತ್ರ ಗಳಿಸಿದರು. ಭಾರತ ಮೊದಲ ೧೦ ಓವರುಗಳಲ್ಲಿ ೩ ವಿಕೆಟ್‌ಗೆ ೭೧ ರನ್ ಗಳಿಸಿತ್ತು. ನಾಯಕ ಶ್ರೇಯಸ್ ಅಯ್ಯರ್ ೨೨ ಎಸೆತಗಳಲ್ಲಿ ೨೫ ಹಾಗೂ ಶಿವಂ ದುಬೈ ೧೦ ಎಸೆತಗಳಲ್ಲಿ ೧೦ ರನ್ ಕ್ರೀಸ್ ಬಳಿ ಇದ್ದರು.


