ನವದೆಹಲಿ: ಇಂಗ್ಲೆAಡ್ ಕ್ರಿಕೆಟ್ ತಂಡದ ಖ್ಯಾತ ವಿಕೆಟ್ ಕೀಪರ್ ಬ್ಯಾಟರ್ ಜೋಶ್ ಬಟ್ಲರ್ ಟ್ವೆಂಟಿ-೨೦ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರ ಎಂಬ ಗೌರವಕ್ಕೆ ಪಾತ್ರರಾದರು.
ಇಂಗ್ಲೆAಡ್‌ನಲ್ಲಿ ನಡೆಯುತ್ತಿರುವ ೧೦೦ ಎಸೆತಗಳ ಟ್ವೆಂಟಿ-೨೦ ಪಂದ್ಯಾವಳಿಯಲ್ಲಿ ಮ್ಯಾಂಚೆಸ್ಟರ್ ಸೂಪರ್ ಗೇಂಟ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಜೋಶ್ ಬಟ್ಲರ್ ಕೇವಲ ೨೦ ಎಸೆತಗಳಲ್ಲಿ ೫೧ ರನ್‌ಗಳಿಸಿದರು.
ವಾಲೆಶ್ ಫೈರ್ ವಿರುದ್ಧ ನಡೆದ ಪಂದ್ಯದಲ್ಲಿ ಭರ್ಜರಿ ಇನ್ನಿಂಗ್ಸ್ ಆಡಿದ ಬಟ್ಲರ್ ತಮ್ಮ ತಂಡಕ್ಕೆ ೯ ವಿಕೆಟ್‌ಗಳ ಭರ್ಜರಿ ಜಯವನ್ನೂ ಕೊಡಿಸಿದರು. ಇದರ ಜತೆ ಜತೆಗೆ ಅವರು ಟ್ವೆಂಟಿ-೨೦ ಕ್ರಿಕೆಟ್‌ನಲ್ಲಿ ೧೪,೮೩೩ ರನ್‌ಗಳನ್ನು ಗಳಿಸಿದರು. ಇದಕ್ಕೆ ಮುನ್ನ ವೆಸ್ಟ್ ಇಂಡೀಸ್ ತಂಡದ ಕಿರಣ್ ಪೋಲಾರ್ಡ್ ಟ್ವೆಂಟಿ-೨೦ ಕ್ರಿಕೆಟ್‌ನಲ್ಲಿ ೧೪,೮೦೩ ರನ್‌ಗಳನ್ನು ಗಳಿಸಿ ಚುಟುಕು ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರ ಎಂಬ ಗೌರವ ಪಡೆದಿದ್ದರು.


