LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಬಾಗಲಕೋಟೆಯಲ್ಲಿ ಅಜಾನ್ ಸೌಂಡ್ ಗದ್ದಲ: ಹಿಂದೂ ಸಂಘಟನೆಗಳಿಂದ ಪ್ರತಿಭಟನೆ

Advertisement

ಬಾಗಲಕೋಟೆ : ನಗರದಲ್ಲಿ (Bagalakote) ಅಕ್ರಮ ಆರೋಪಿಸಿ ಬಿಜೆಪಿ (BJP) ಮತ್ತು ವಿವಿಧ ಹಿಂದೂ ಸಂಘಟನೆಗಳ ಕಾರ್ಯಕರ್ತರು ಬೀದಿಗಿಳಿದು ಬೃಹತ್ ಪ್ರತಿಭಟನೆ ನಡೆಸಿದ್ದಾರೆ.

ನಗರದ ನಿವಾಸಿಗಳಿಗೆ ಶಬ್ದ ಮಾಲಿನ್ಯದಿಂದ ತೊಂದರೆಯಾಗುತ್ತಿದ್ದು, ಅನುಮತಿ ಇಲ್ಲದೆ ಧ್ವನಿವರ್ಧಕಗಳನ್ನು ಬಳಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಯಾವುದೇ ಅಧಿಕೃತ ಪುರಾವೆ ಮತ್ತು ಅನುಮತಿಯಿಲ್ಲದೆ ಅಕ್ರಮವಾಗಿ ಮಸೀದಿ ನಿರ್ಮಿಸಲಾಗಿದೆ ಎಂದು ಆರೋಪಿಸಿದ ಮುಖಂಡರು, ಸಂಬಂಧಪಟ್ಟ ಆಡಳಿತ ಮಂಡಳಿ ಮತ್ತು ಧ್ವನಿವರ್ಧಕಗಳ ವಿರುದ್ಧ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಹಾಗೂ ಪೊಲೀಸ್ ವೃತ್ತದ ಬಳಿ ಜಮಾಯಿಸಿದ ನೂರಾರು ಕಾರ್ಯಕರ್ತರು ಜಿಲ್ಲಾಡಳಿತ ಮತ್ತು ಸ್ಥಳೀಯ ಆಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಸುಪ್ರೀಂ ಕೋರ್ಟ್ ಮತ್ತು ಸರ್ಕಾರದ ಶಬ್ದ ಮಾಲಿನ್ಯ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು, ನಿಯಮ ಉಲ್ಲಂಘಿಸುವ ಮೈಕ್ ಸಹಿತ ಧ್ವನಿವರ್ಧಕಗಳನ್ನು ತಕ್ಷಣವೇ ತೆರವುಗೊಳಿಸಬೇಕು ಎಂದು ಆಗ್ರಹಿಸಿ ಸ್ಥಳೀಯ ಆಡಳಿತಕ್ಕೆ ಮನವಿ ಸಲ್ಲಿಸಿದರು.ಈ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಭರವಸೆ ನೀಡಿದ್ದಾರೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೆಕ್ಕಾಯ್ ಟೆಸ್ಟ್ : ಬಾಂಗ್ಲಾದೇಶ ತಿರುಗೇಟು ಭಾರತದ ಯುವ ಬ್ಯಾಡ್ಮಿಟನ್ ಜೋಡಿಗೆ ಕಂಚಿನ ಪದಕ ಆಪ್ತರಿಗೆ ಮಂತ್ರಿಗಿರಿ ತಪ್ಪಿದ್ದಕ್ಕೆ ಅಸಮಾಧಾನ : ಕೆ.ಸಿ. ವೇಣುಗೋಪಾಲ್ ಬಳಿ ಸಿದ್ದು ಬೇಸರರಾಷ್ಟ್ರೀಯ ಅಧ್ಯಕ್ಷ ಅನ್ನೋಕೆ ನಾಚಿಕೆಯಾದರೆ ದಲಿತ ಅನ್ನಿ: ಖರ್ಗೆ ತೀವ್ರ ವಾಗ್ದಾಳಿ 200 ಹಣಕ್ಕಾಗಿ ಮಂಗಳಮುಖಿಯ ಕತ್ತು ಸೀಳಿ ಬರ್ಬರ ಹತ್ಯೆ; ಆರೋಪಿ ಅರೆಸ್ಟ್ ನೊಂದವರ ಜೊತೆ ದುರ್ವರ್ತನೆ ತೋರಿದ ಪಿಎಸ್‌ಐ ವರ್ಗಾವಣೆ ; ಠಾಣೆಯಲ್ಲೇ ಪಟಾಕಿ ಸಿಡಿಸಿ ಸಂಭ್ರಮಿಸಿದ ಜನರುಹಂಪಿ ಪ್ರವಾಸಕ್ಕೆ ಬಂದಿದ್ದ ತಾಯಿ ಹಾಗೂ ಮಗಳು ತುಂಗಭದ್ರಾ ನದಿಯಲ್ಲಿ ಕಾಲು ಜಾರಿ ಬಿದ್ದು ನಾಪತ್ತೆಕಾರ್ಖಾನೆಯಲ್ಲಿ ಭೀಕರ ಬೆಂಕಿ ಅವಘಡ: ಮೂವರು ಎಂಜಿನಿಯರ್ ಗಳು ಸಾವು, ಓರ್ವನ ಸ್ಥಿತಿ ಗಂಭೀರಸ್ಪೀನ್ನರ್ ಸಾಯಿರಾಜ್ ಜೇಯನ್ ಆಡಿಸುವ ಕುರಿತು ನಾಳೆಯೇ ನಿರ್ಧಾರ : ಬಹುತಲೆ ಭಾರತ- ಶ್ರೀಲಂಕ ಎರಡನೇ ಟೆಸ್ಟ್ ನಾಳೆಯಿಂದ