Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕ್ರಿಕೆಟ್: ವಿಂಡೀಸ್- ಲಂಕಾ ಪಂದ್ಯವೂ ಮಳೆಗೆ ರದ್ದು

Advertisement


ಜಮೈಕಾ: ವೆಸ್ಟ್ ಇಂಡೀಸ್ ಹಾಗೂ ಶ್ರೀಲಂಕಾ ಕ್ರಿಕೆಟ್ ತಂಡಗಳ ನಡುವೆ ಇಲ್ಲಿ ನಡೆಯಬೇಕಿದ್ದ ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯ ಮಳೆಯ ಕಾರಣ ಒಂದು ಎಸೆತ ಕಾಣದೇ ರದ್ದಾಯಿತು.
ಇಲ್ಲಿನ ಸಬೀನಾ ಪಾರ್ಕ್ನಲ್ಲಿ ಪಂದ್ಯದ ಮುನ್ನಾ ದಿನ ಸುರಿದ ಮಳೆ ಮೈದಾನವನ್ನು ಒದ್ದೆ ಮಾಡಿತ್ತು. ಪಂದ್ಯದ ದಿನವಾದ ಕಳೆದ ರಾತ್ರಿ ಟಾಸ್ ಹಾಕಲಾಯಿತು. ಆದರೆ ಇನ್ನೇನೂ ಪಂದ್ಯ ಆರಂಭ ಆಗಬೇಕೆಂಬ ಹೊತ್ತಿಗೆ ಮತ್ತೇ ಬಂದ ಮಳೆರಾಯ ನಿಲ್ಲಲೇ ಇಲ್ಲ.  ಇದರಿಂದ ಪಂದ್ಯ ರದ್ದಾಗಿದೆ. ಇದರಿಂದ ಇದೀಗ ವಿಂಡೀಸ್ ಈ ಸರಣಿ ಗೆಲ್ಲಲು ಸಾಧ್ಯವಿಲ್ಲ. ಹೆಚ್ಚೆಂದರೆ ಸರಣಿಯನ್ನು ೧-೧ ರಿಂದ ಡ್ರಾ ಮಾಡಿಕೊಳ್ಳಬಹುದಷ್ಟೇ. ಸೋಮವಾರ ಸರಣಿಯ ಮೂರನೇ ಏಕದಿನ ನಡೆಯಲಿದ್ದು, ಶ್ರೀಲಂಕಾ ಗೆದ್ದರೆ ಸರಣಿಯನ್ನು ೨-೦ ರಿಂದ ಗೆದ್ದುಕೊಳ್ಳಲಿದೆ. 

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST