ನವದೆಹಲಿ: ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಖ್ಯಾತ ಆಟಗಾರರಾಗಿದ್ದ ಗ್ಯಾರಿ ಸೋಬರ್ಸ್ (೮೯) ನಿಧನರಾದರು.
ಇನ್ನು ೧೦ ದಿನಕ್ಕೆ ೯೦ ನೇ ಜನ್ಮದಿನ ಆಚರಿಸಿಕೊಳ್ಳಬೇಕಿದ್ದ ಗ್ಯಾರಿ ಸೋಬರ್ಸ್ ನಿಧನರಾಗಿರುವುದನ್ನು ಅವರ ಪುತ್ರ ಖಚಿತಪಡಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
೧೯೫೪ ರಿಂದ ೧೯೭೪ ರವರೆಗೆ ಎರಡು ದಶಕಗಳ ಕಾಲ ಕ್ರಿಕೆಟ್ ಸಾಮ್ರಾಜ್ಯದ ದೊರೆಯಾಗಿದ್ದ ಗ್ಯಾರಿ ಸೋಬರ್ಸ್ ಬಾರ್ಬೋಡಾಸ್‌ನಲ್ಲಿ ಜನಿಸಿದ್ದರು.


