ಲಂಡನ್: ದಾಖಲೆಯ ೨೫ ನೇ ಗ್ರಾö್ಯಂಡ್ ಸ್ಲಾö್ಯಮ್ ಟೂರ್ನಿ ಗೆಲ್ಲುವದರತ್ತ ಗಮನ ಹರಿಸಿರುವ ಖ್ಯಾತ ಟೆನಿಸ್ ಆಟಗಾರ ನೋವಾಕ್ ಜಾಕೋವಿಕ್ ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಪ್ರಯಾಸದ ಜಯ ಸಾಧಿಸಿ ವಿಂಬಲ್ಡನ್ ಪಂದ್ಯಾವಳಿಯ ಸೆಮಿಫೈನಲ್ ತಲುಪಿದ್ದಾರೆ.
ಸೆಂಟರ್‌ಕೋರ್ಟ್ನಲ್ಲಿ ೫ ಗಂಟೆ ೧೫ ನಿಮಿಷಗಳವರೆಗೆ ನಡೆದ ಸುಧೀರ್ಘ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನೋವಾಕ್ ಜಾಕೋವಿಕ್ ಅವರು ಫಿಲೆಕ್ಸ್ ಔಗೇರ್ ವಿರುದ್ಧ ೭-೬ (೧೨-೧೦), ೩-೬, ೬-೩, ೬-೭ (೪-೭), ೭-೬ (೧೦-೦೪) ೫ ಸೆಟ್‌ಗಳ ಸುಧೀರ್ಘ ಪಂದ್ಯದಲ್ಲಿ ಗೆದ್ದು ಸೆಮಿಫೈನಲ್ ತಲುಪಿದರು.
ನೋವಾಕ್ ಜಾಕೋವಿಕ್ ಸೆಮಿಫೈನಲ್ ಪಂದ್ಯದಲ್ಲಿ ಮತ್ತೋರ್ವ ಖ್ಯಾತ ಯುವ ಆಟಗಾರ ಸೆನೇರ್ ಅವರನ್ನು ಎದುರಿಸುವರು.


