ಸಿಂಧನೂರು : ಅಕ್ರಮವಾಗಿ ಪಡಿತರ ಅಕ್ಕಿ ಹಾಗೂ ರೇಷನ್ ಮಾರಾಟವನ್ನು ತಡೆಯುವ ವಿಷಯಕ್ಕೆ ಸಂಬಂದಿಸಿದಂತೆ ದಲಿತ ಸಂಘರ್ಷ ಸಮಿತಿ (ಭೀಮವಾದ) ತಾಲೂಕು ಘಟಕ ಸಿಂಧನೂರು ತಹಸೀಲ್ ಕಚೇರಿಯ ಮಾನ್ಯ ಶಿರಸ್ತಾರ್ ಅವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು ತಾಲೂಕಿಗೆ ಒಳಪಡುವ ಗುಂಜಳ್ಳಿ ಕ್ಯಾಂಪ್, ರಾಘವೇಂದ್ರ ಕ್ಯಾಂಪ್, ಕಲ್ಮಂಗಿ,ತುರ್ವಿಹಾಳ, ಸತ್ಯನಾರಾಯಣ ಕ್ಯಾಂಪ್, ಕೆ.ಹೊಸಳ್ಳಿ, ಗುಂಜಳ್ಳಿ, ಬಸವಣ್ಣ ಕ್ಯಾಂಪ್, ವೆಂಕಟೇಶ್ವರ ಕ್ಯಾಂಪ್, 7ನೇ ಮೈಲಿ ಕ್ಯಾಂಪ್, ಮಲ್ಲದಗುಡ್ಡ, ವಿರುಪಾಪುರ ಹರಳಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಜನರಿಗೆ ಉಚಿತವಾಗಿ ದೊರೆಯಬೇಕಾದ ಸರ್ಕಾರದ ಸೌಲಭ್ಯಗಳನ್ನು ಅಕ್ರಮವಾಗಿ ಪಡಿತರ ಅಕ್ಕಿಯನ್ನು ನ್ಯಾಯಬೆಲೆ ಅಂಗಡಿಯವರು ಹಣಕ್ಕೆ ಮಾರಾಟ ಮಾಡುತ್ತಿದ್ದು ಈ ಕುರಿತು ದೂರುಗಳನ್ನು ಮೌಖಿಕವಾಗಿ ಸಂಬಂಧಪಟ್ಟ ಇಲಾಖೆಗೆ ತಿಳಿಸಿದ್ದರು ಕೂಡ ಯಾವುದೇ ಪ್ರಯೋಜನವಾಗಿಲ್ಲ ಈ ಅಕ್ರಮ ಮಾರಾಟವನ್ನು ತಡೆಗಟ್ಟಿ ಸೂಕ್ತ ಕ್ರಮ ಕೈಗೊಂಡು ಜನರಿಗೆ ಸಿಗುವ ಸೌಲಭ್ಯವನ್ನು ಅವರಿಗೆ ಒದಗಿಸಬೇಕು ಇಲ್ಲದಿದ್ದರೆ ಈ ಮನವಿ ಪತ್ರವನ್ನು ನೀವು ನಿರ್ಲಕ್ಷ ವಹಿಸಿದಲ್ಲಿ ಮುಂದಿನ ದಿನಗಳಲ್ಲಿ ತಮ್ಮ ಕಛೇರಿಯ ಮುಂದುಗಡೆ ದರಣಿ ಸತ್ಯಾಗ್ರಹ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ : ತಾಲೂಕ ಅಧ್ಯಕ್ಷ ಸದೇವಪ್ಪ ರಾಘವೇಂದ್ರ ಕ್ಯಾಂಪು. ತಾಲೂಕ ಉಪಾಧ್ಯಕ್ಷ ಆನಂದ ತುರ್ವಿಹಾಳ ನಗರ ಘಟಕ ಅಧ್ಯಕ್ಷ ಉಮೇಶ್ ಕಲ್ಮಂಗಿ. ಸದಸ್ಯರಾದ,ಯಮನೂರ ನವಲಹಳ್ಳಿ. ದುರುಗಪ್ಪ.ಕಾಸಿಂಸಾಬ್ ಸೇರಿದಂತೆ ಇನ್ನೂ ಅನೇಕರಿದ್ದರು


