ನ್ಯೂ ಚಂದಿಗಢ (ಮುಲ್ಲಾನಪುರ): ಸನ್‌ರೈಸರ್ಸ್ ಹೈದರಾಬಾದ್ ಹಾಗೂ ರಾಜಸ್ತಾನ್ ರಾಯಲ್ಸ್ ತಂಡಗಳು ನಾಳೆ ಇಲ್ಲಿ ನಡೆಯುವ ಎಲಿಮಿನೆಟರ್ ಪಂದ್ಯದಲ್ಲಿ ಎದುರಾಗಲಿವೆ.
ಮಹಾರಾಜ ಯಧುವೀಂದ್ರ ಸಿಂಗ್ ಅಂತಾರಾಷ್ಟಿçÃಯ ಕ್ರೀಡಾಂಗಣದಲ್ಲಿ ಪಂದ್ಯ ನಾಳೆ ಸಾಯಂಕಾಲ ೭:೩೦ ಕ್ಕೆ ಆರಂಭವಾಗಲಿದೆ.
ಈ ಪಂದ್ಯದಲ್ಲಿ ಸೋತ ತಂಡ ಸೀದಾ ಮನೆಗೆ ತೆರಳಲಿದ್ದು, ಗೆದ್ದ ತಂಡವು ಕ್ವಾಲಿಫಾಯರ್-೧ ರಲ್ಲಿ ಸೋತ ತಂಡದೊAದಿಗೆ ಆಡಿ ಗೆದ್ದರೆ ಫೈನಲ್ ತಲುಪುವುದು.
ನಾಳಿನ ಪಂದ್ಯ ಎಲಿಮಿನೆಟರ್ ಆಗಿರುವುದರಿಂದ ಎರಡೂ ತಂಡಗಳು ಗೆಲ್ಲಲೇಬೇಕೆಂಬ ಛಲದಿಂದ ಕಣಕ್ಕೆ ಇಳಿಯಲಿವೆ. ಎರಡೂ ತಂಡಗಳು ಬಲಿಷ್ಠ ಬ್ಯಾಟಿಂಗ್ ಪಡೆ ಹೊಂದಿರುವ ತಂಡಗಳಾಗಿದ್ದು, ಈ ಪಂದ್ಯದಲ್ಲಿಯೂ ಪ್ರೇಕ್ಷಕರು ರನ್ ಮಳೆಯಲ್ಲಿ ತೋಯಿಸಿಕೊಳ್ಳುವ ಸಾಧ್ಯತೆ ಇದೆ.

