ಚೆಲ್ಮಸಪೋರ್ಡ್ (ಲಂಡನ್) ಇಂಗ್ಲೆAಡ್ ಪ್ರವಾಸ ಕೈಗೊಂಡಿರುವ ಭಾರತ ಮಹಿಳಾ ಕ್ರಿಕೆಟ್ ತಂಡವು ತನ್ನ ಪ್ರವಾಸದ ಭಾಗವಾಗಿ ಇಂದು ಮೊದಲ ಟ್ವೆಂಟಿ-೨೦ ಪಂದ್ಯವನ್ನು ತವರು ತಂಡದ ವಿರುದ್ಧ ಆಡಲಿದೆ.
ಭಾರತೀಯ ಕಾಲಮಾನ ರಾತ್ರಿ ೧೧ ಗಂಟೆಗೆ ಪಂದ್ಯ ಆರಂಭವಾಗಲಿದೆ. ಜೂನ್ ೧೧ ರಿಂದ ಆರಂಭವಾಗುವ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವ ಸಲುವಾಗಿಯೂ ಇಂಗ್ಲೆAಡ್‌ಗೆ ತೆರಳಿರುವ ಭಾರತ ವನಿತೆಯರು ತಂಡವು ತವರು ತಂಡದ ವಿರುದ್ಧ ಚುಟುಕು ಸರಣಿಯನ್ನು ಆಡಲಿದೆ.

