ಭಾರತದ ರಾಜಧಾನಿ ದೆಹಲಿಯಲ್ಲಿ ಅಲ್ಲಿನ ಚೊಲೆ ಬಟೂರೆ ಹಾಗೂ ಬಟರ್ ಚಿಕನ್ ಪ್ರಸಿದ್ದ ಆಹಾರಗಳು. ಇಲ್ಲಿನ ಜನರಿಗೆ ಈ ಆಹಾರ ತಿಂಡಿಗಳ ಮೇಲೆ ಅಪಾರ ಪ್ರೀತಿ. ಆದರೆ ಏತನ್ಮಧ್ಯೆಯೂ ದಕ್ಷಿಣ ಭಾರತದ ಪ್ರಸಿದ್ದ ತಿಂಡಿಯಾದ ದೋಸಾಗೆ ಕೂಡ ಇಲ್ಲಿ ತುಂಬಾ ಬೇಡಿಕೆಯಂತೆ.
ರವಿವಾರ ರಜೆ ದಿನ ಕುಟುಂಬ ಸದಸ್ಯರು ಔಟಿಂಗ್ಸ್ಗೆ (ಹೊರಗೆ ತಿರುಗಾಡಲು) ಹೋದಾಗ ದೋಸೆ ರುಚಿಯನ್ನು ದೆಹಲಿಯ ಜನ ತುಂಬಾ ಸವಿಯುತ್ತಾರಂತೆ. ಬೆಂಗಳೂರು, ತಮಿಳುನಾಡು ಕಡೆಯಿಂದ ಹೋಗಿ ದೆಹಲಿಯಲ್ಲಿ ವಾಸಿಸಿರುವ ಜನರು ದೋಸಾ ಹೆಚ್ಚಿಗೆ ಸವಿಯುತ್ತಾರಂತೆ. ಅಲ್ಲಿನ ಸ್ಥಳೀಯ ಜನರು ದೋಸೆ ರುಚಿಯನ್ನು ಸವಿಯದೇ ಬಿಡುವುದಿಲ್ಲವಂತೆ.


