LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Politics News

ಕೊನೆಗೂ ಜಿಲ್ಲಾ, ತಾಲ್ಲೂಕು ಪಂಚಾಯತಿ ಚುನಾವಣೆಗೆ ಮುಹೂರ್ತ ಫಿಕ್ಸ್ : ಸಂಪುಟ ಸಮ್ಮತಿ 

Advertisement

ಬೆಂಗಳೂರು: ಕಾನೂನು ಹೋರಾಟ ಹಾಗೂ ಕ್ಷೇತ್ರ ಪುನರ್‌ವಿಂಗಡಣೆಯ ಗೊಂದಲಗಳಿಂದಾಗಿ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಕರ್ನಾಟಕದ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳಿಗೆ ಕೊನೆಗೂ ಕಾಲ ಕೂಡಿಬರುವ ಲಕ್ಷಣಗಳು ಗೋಚರಿಸಿವೆ. 

ಗ್ರಾಮೀಣ ಭಾಗದಲ್ಲಿ ಸ್ಥಳೀಯ ಆಡಳಿತ ವ್ಯವಸ್ಥೆಯನ್ನು ಮರಳಿ ಸಕ್ರಿಯಗೊಳಿಸಲು ಗಂಭೀರ ಚಿಂತನೆ ನಡೆಸಿರುವ ರಾಜ್ಯ ಸರ್ಕಾರ, ಮುಂಬರುವ ಜನವರಿ ಮೊದಲ ವಾರದಲ್ಲೇ ಜಿಪಂ ಹಾಗೂ ತಾಪಂ ಚುನಾವಣೆಗಳನ್ನು ನಡೆಸಲು ಮಹತ್ವದ ಒಲವು ತೋರಿದೆ.

ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಸಂಬಂಧ ಸುದೀರ್ಘ ಚರ್ಚೆ ನಡೆದಿದ್ದು, ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಅಸ್ತು ಎನ್ನಲಾಗಿದೆ.

ಸಚಿವ ಸಂಪುಟ ಸಭೆಯಲ್ಲಿ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಪ್ರಸ್ತುತ ಸ್ಥಿತಿಗತಿ ಹಾಗೂ ಚುನಾವಣಾ ಸಿದ್ಧತೆಗಳ ಬಗ್ಗೆ ವಿಸ್ತೃತ ಪರಾಮರ್ಶೆ ನಡೆಸಲಾಯಿತು. ಸಭೆಯ ನಿರ್ಧಾರದಂತೆ, ಮೊದಲ ಹಂತದಲ್ಲಿ ಜನವರಿ ಆರಂಭದಲ್ಲಿ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿಗಳಿಗೆ ಮತದಾನ ಪ್ರಕ್ರಿಯೆ ಪೂರ್ಣಗೊಳಿಸಲು ಚರ್ಚಿಸಲಾಗಿದೆ. 

ಈ ಎರಡು ಹಂತದ ಚುನಾವಣೆಗಳು ಮುಕ್ತಾಯಗೊಂಡ ಬೆನ್ನಲ್ಲೇ, ಮುಂದಿನ ಹಂತವಾಗಿ ಗ್ರಾಮ ಪಂಚಾಯಿತಿ ಚುನಾವಣೆಗಳನ್ನೂ ಸಾಲಾಗಿ ನಡೆಸಲು ಸರ್ಕಾರ ತಾತ್ವಿಕ ಕಾರ್ಯತಂತ್ರ ರೂಪಿಸಿದೆ.

 

 

 

 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿಧಾನಸಭೆ ಕಲಾಪದ ಅಣುಕು ಪ್ರದರ್ಶನ ಗಮನ ಸೆಳೆಯಲಿರುವ ವಿದ್ಯಾರ್ಥಿಗಳ ಯುವ ಸಂಸತ್ತುಜಿಪಂ ಚುನಾವಣೆ : 1129 ಜಿಲ್ಲಾ ಪಂಚಾಯತಿ ಸ್ಥಾನಗಳಿಗೆ ಮೀಸಲಾತಿ ಅಧಿಸೂಚನೆ ಪ್ರಕಟ ರಾಜ್ಯಾಧ್ಯಂತ 'ಹಾಫ್ ಹೆಲ್ಮೆಟ್‌'ಗೆ ಸಂಪೂರ್ಣ ನಿಷೇಧ: ಉಲ್ಲಂಘಿಸಿದರೇ ದಂಡ ಫಿಕ್ಸ್! ಮುಂದಿನ ವಾರ ಏಕದಿನ ತಂಡದ ಆಯ್ಕೆ ಸಾಧ್ಯತೆ ರಣಜಿ ತಂಡದಿಂದಲೂ ಸೂರ್ಯಕುಮಾರ್ ಗೆ ಕೊಕ್ ನಾಳೆ ಜಿಪಂ-ತಾಪಂ ಚುನಾವಣೆ ಮೀಸಲಾತಿಯ ಪ್ರಾಥಮಿಕ ಅಧಿಸೂಚನೆ ಬಿಡುಗಡೆ : ಈಶ್ವರ್‌ ಖಂಡ್ರೆ ಸ್ಟಿಂಗ್ ಏಜೆನ್ಸಿಗಳ ಬಗ್ಗೆ ಸಿಎಂ ಸ್ಪಷ್ಟನೆ ನೀಡಲಿ: ಬಿ.ವೈ ವಿಜಯೇಂದ್ರ ಸಚಿವರ ಮೇಲೆ 'ಖಾಸಗಿ ಸ್ಟಿಂಗ್ ಆಪರೇಷನ್' ಬಲೆ: ಕ್ಯಾಬಿನೆಟ್ ಸಭೆಯಲ್ಲಿ ಸಿಎಂ ಎಚ್ಚರಿಕೆದಸರಾ ಹಬ್ಬಕ್ಕೆ ಕರ್ನಾಟಕ ರಾಜ್ಯ ಸರ್ಕಾರ ಆತ್ಮೀಯವಾಗಿ ಶ್ರೀ ಶಿವಕುಮಾರ ಸ್ವಾಮೀಜಿ ಅವರನ್ನು ಆಮಂತ್ರಿಸಿದೆವಿದ್ಯಾರ್ಥಿಗಳು ಓದುವ ಮೂಲಕ ತಮ್ಮ ವ್ಯಕ್ತಿತ್ವವನ್ನು  ಬೆಳೆಸಿಕೊಳ್ಳಬೇಕು : ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಡಾ.ಜೀವನಸಾಬ ಬಿನ್ನಾಳ