ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ಹಾರ್ಧಿಕ ಪಾಂಡ್ಯಾ ಮುಂಬರುವ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಗುಜರಾತ್ ಟೈಟನ್ಸ್ ತಂಡಕ್ಕೆ ವಾಪಸ್ಸಾಗುವುದರ ಕುರಿತು ಮಾತುಕತೆ ನಡೆದಿದೆಯಾದರೂ ನಾಯಕನಾಗಿ ತಂಡಕ್ಕೆ ಮರಳುವುದಕ್ಕೆ ಗುಜರಾತ್ ಟೈಟನ್ಸ್ ಪ್ರಾಂಚೈಸಿ ಒಪ್ಪಿಲ್ಲ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಹಾರ್ಧಿಕ ಪಾಂಡ್ಯಾ ಮುಂಬೈ ಇಂಡಿಯನ್ಸ್ಗೆ ಮರಳುವುದಕ್ಕೆ ಮುನ್ನ ೨೦೨೪ ರಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಐಪಿಎಲ್ ಚಾಂಪಿಯನ್ ತಂಡವನ್ನಾಗಿ ಮಾಡುವುದರಲ್ಲಿ ಯಶಸ್ವಿಯಾಗಿದ್ದರು.
ಗುಜರಾತ್ ತಂಡಕ್ಕೆ ಇದೀಗ ಭಾರತ ತಂಡದ ಟೆಸ್ಟ್ ಹಾಗೂ ಏಕದಿನ ತಂಡದ ನಾಯಕ ಶುಭಮಾನ್ ಗಿಲ್ ನಾಯಕರಾಗಿದ್ದಾರೆ. ಈ ಸಂದರ್ಭದಲ್ಲಿ ಪಾಂಡ್ಯಾ ಅವರನ್ನು ನಾಯಕರನ್ನಾಗಿ ಮಾಡಿ ಗುಜರಾತ್ ಟೈಟನ್ಸ್ ತಂಡಕ್ಕೆ ಕರೆ ತರಲು ಪ್ರಾಂಚೈಸಿ ಒಪ್ಪಿಲ್ಲ ಎಂದು ವರದಿಯಾಗಿದೆ.


