ಗಾಲೆ(ಶ್ರೀಲAಕಾ): ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಭಾರತ ಗೆದ್ದ ೫ ನೇ ನಿಮಿಷದಲ್ಲಿ ಮಳೆ ಬಂದು ಸುರಿಯಲು ಆರಂಭಿಸಿದ್ದು, ಮಳೆರಾಯನಿಗೆ ಒಂದು ಥ್ಯಾಂಕ್ಸ್ ಹೇಳವಂತಾಗಿದೆ.
ಗಾಲೆ ಟೆಸ್ಟ್ನಲ್ಲಿ ಮಳೆರಾಯ ಎರಡು ದಿನ ಕಾಟ ಕೊಟ್ಟರೂ ಭಾರತ ಪಂದ್ಯ ಗೆಲ್ಲುವಲ್ಲಿ ಯಶಸ್ವಿಯಾಯಿತು. ಆದರೆ ಕಡೆಯ ದಿನದಂದು ಮಳೆರಾಯ ಭಾರತ ಪಂದ್ಯ ಗೆಲ್ಲುವವರೆಗೆ ನಿಂತಿದ್ದಕ್ಕೆ ಭಾರತದ ಕ್ರಿಕೆಟ್ ಅಭಿಮಾನಿಗಳು ಮಳೆರಾಯನಿಗೆ ಥ್ಯಾಂಕ್ಸ್ ಹೇಳುವಂತೆ ಆಗಿದೆ.


