ಧರ್ಮಶಾಲಾ: ಈ ಬಾರಿಯ ಐಪಿಎಲ್ ಪಂದ್ಯಾವಳಿಯಲ್ಲಿ ಎರಡು ಪ್ರಬಲ ತಂಡಗಳಾಗಿ ಹೊರ ಹೊಮ್ಮಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಇಂದಿಲ್ಲಿ ನಡೆಯುವ ಕ್ವಾಲಿಫಾಯರ್-೧ ರ ಪಂದ್ಯದಲ್ಲಿ ಎದುರಾಗಲಿದ್ದು, ನೇರ ಫೈನಲ್ ಪ್ರವೇಶಕ್ಕೆ ಯತ್ನಿಸಲಿವೆ.
ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಶನ್ ಮೈದಾನದಲ್ಲಿ ಪಂದ್ಯ ಸಾಯಂಕಾಲ ೭:೩೦ ಕ್ಕೆ ಆರಂಭವಾಗಲಿದೆ. ಎರಡೂ ತಂಡಗಳು ಬಲಿಷ್ಠ ತಂಡಗಳಾಗಿದ್ದು, ಪಂದ್ಯ ತೀವ್ರ ಪೈಪೋಟಿಯಿಂದ ಕೂಡಿರುವ ಸಾಧ್ಯತೆ ಇದೆ.
ಗುಜರಾತ್ ಟೈಟನ್ಸ್ ತಂಡವು ಪಂದ್ಯಾವಳಿಯ ಆರಂಭ ಪಂದ್ಯಗಳಲ್ಲಿ ಬ್ಯಾಟಿಂಗ್ ಸಮಸ್ಯೆ ಎದುರಿಸುತ್ತಿತ್ತು. ಪಂದ್ಯಗಳು ಸಾಗಿದಂತೆ ಆರಂಭ ಆಟಗಾರ ಸಾಯಿ ಸುದರ್ಶನ್ ಉತ್ತಮ ಬ್ಯಾಟಿಂಗ್ ಲಯಕ್ಕೆ ಮರಳಿದ್ದಾರೆ. ನಾಯಕ ಶುಭಮಾನ್ ಗಿಲ್ ಹಾಗೂ ಬ್ಯಾಟುಗಾರರು ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ.
ಉತ್ತಮ ದಾಖಲೆ: ಕಳೆದ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಎರಡೂ ತಂಡಗಳು ಪ್ಲೇ ಆಪ್ ಹಂತ ತಲುಪಿವೆ. ಹೀಗಾಗಿ ಎರಡೂ ತಂಡಗಳು ಕನಸಿಸ್ಟನ್ಸಿ ಪ್ರದರ್ಶನ ತೋರಿವೆ. ಸಮಬಲ ಸಾಧನೆ ತೋರಿರುವ ಎರಡೂ ತಂಡಗಳ ಕದನ ಇಂದು ತೀವ್ರ ಕುತೂಹಲ ಕೆರಳಿಸಿದೆ.

