ಮುಂದಿನ ತಿಂಗಳು ನಡೆಯುವ ಪುರುಷರ ವಿಶ್ವಕಪ್ ಹಾಕಿ ಪಂದ್ಯಾವಳಿಗೆ ೨೦ ಸದಸ್ಯರ ಭಾರತ ಹಾಕಿ ತಂಡವನ್ನು ಪ್ರಕಟಿಸಲಾಗಿದ್ದು, ಹರಮನಪ್ರೀತ್ ಸಿಂಗ್ ತಂಡವನ್ನು ಮುನ್ನಡೆಸುವರು.
ಈಚೆಗೆ ಮುಗಿದ ಯುರೋಪಿಯನ್ ಲೀಗ್ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದ ನಾಲ್ವರು ಆಟಗಾರರು ಈ ಪ್ರತಿಷ್ಠಿತ ಪಂದ್ಯಾವಳಿಗೆ ಆಯ್ಕೆಯಾಗಿಲ್ಲ.
ಡಿಪೆಂಡರ್ ಅಮನದೀಪ್ ಲಾಕ್ರಾ, ಮಿಡಫೀಲ್ಡರ್ ರಾಜಕುಮಾರ ಫಾಲ್, ರಭಿಚಂದ್ರ ಸಿಂಗ್ ಹಾಗೂ ಮುನ್ಪಡೆ ಆಟಗಾರ ಸೆಲ್ವಂ ಕಾರ್ತಿ ತಂಡದಿAದ ಹೊರಗುಳಿದ ಆಟಗಾರರು.


