ಸೌಥಹ್ಯಾಂಪ್ಟನ್(ಇAಗ್ಲೆAಡ್): ಭಾರತ ಹಾಗೂ ಇಂಗ್ಲೆAಡ್ ಕ್ರಿಕೆಟ್ ತಂಡಗಳ ನಡುವಿನ ೫ ನೇ ಹಾಗೂ ಚುಟುಕು ಸರಣಿಯ ಕಡೆಯ ಪಂದ್ಯ ಇಂದು ನಡೆಯಲಿದೆ.
ಇಲ್ಲಿನ ದಿ ರೋಸ್ ಬಾಲ್ ಕ್ರೀಡಾಂಗಣದಲ್ಲಿ ಪಂದ್ಯ ಭಾರತೀಯ ಕಾಲಮಾನ ಸಾಯಂಕಾಲ ೭ ಗಂಟೆಗೆ ಆರಂಭವಾಗಲಿದೆ. ಇಂಗ್ಲೆAಡ್ ೫ ಪಂದ್ಯಗಳ ಸರಣಿಯಲ್ಲಿ ಈಗಾಗಲೇ ೩-೦ ಸರಣಿ ಜಯದ ಮುನ್ನಡೆ ಹೊಂದಿದೆ.
ಮಳೆಗೆ ಆಹುತಿಯಾದ ಮೊದಲ ಪಂದ್ಯವನ್ನು ಹೊರತು ಪಡಿಸಿ ಉಳಿದ ಮೂರು ಪಂದ್ಯಗಳಲ್ಲಿ ಇಂಗ್ಲೆAಡ್ ತಂಡವು ಭಾರತ ತಂಡವನ್ನು ಸುಲಭವಾಗಿ ಮಣಿಸಿದೆ.
ಕನಿಷ್ಠ ಪಕ್ಷ ಕಡೆಯ ಪಂದ್ಯವನ್ನಾದರೂ ಗೆದ್ದು, ಮುಂದಿನ ಏಕದಿನ ಹಾಗೂ ಟೆಸ್ಟ್ ಸರಣಿಗಳಿಗೆ ಆತ್ಮವಿಶ್ವಾಸದಿಂದ ಕಣಕ್ಕೆ ಇಳಿಯುವ ಯತ್ನವಾಗಿ ಇಂದು ಭಾರತ ಕಣಕ್ಕೆ ಇಳಿಯಲಿದೆ.


