ಗಾಲೆ(ಶ್ರೀಲಂಕಾ): ಯುವ ಸ್ಪಿನ್ನರ ಮಾನವ ಸುತಾರ ಅವರ ಕರಾರುವಕ್ಕಾದ ಬೌಲಿಂಗ್ ನೆರವಿನಿಂದ ಭಾರತ ಕ್ರಿಕೆಟ್ ತಂಡವು ಶ್ರೀಲಂಕಾ ವಿರುದ್ಧ ಇಂದಿಲ್ಲಿ ಮುಗಿದ ಮೊದಲ ಟೆಸ್ಟ್ ಪಂದ್ಯವನ್ನು ೧೬೫ ರನ್‌ಗಳಿಂದ ಗೆದ್ದುಕೊಂಡಿತು.
ಗಾಲೆ ಅಂತಾರಾಷ್ಟಿçÃಯ ಕ್ರೀಡಾಂಗಣದಲ್ಲಿ ಪಂದ್ಯದ ಕಡೆಯ ದಿನವಾದ ಇಂದು ಶ್ರೀಲಂಕಾ ತನ್ನ ದ್ವಿತೀಯ ಸರದಿಯಲ್ಲಿ ೨೦೬ ರನ್‌ಗಳಿಗೆ ಆಲೌಟಾಗಿ ೧೬೫ ರನ್‌ಗಳಿಂದ ಶುಭಮಾನ್ ಗಿಲ್ ಪಡೆಗೆ ಶರಣಾಯಿತು.
ಯುವ ಸ್ಪಿನ್ನರ್ ಮಾನವ ಸುತಾರ ಅವರು ಎರಡನೇ ಇನ್ನಿಂಗ್ಸ್ನಲ್ಲಿ ೫೫ ರನ್‌ಗಳನ್ನು ನೀಡಿ ೬ ವಿಕೆಟ್ ಪಡೆದರೆ, ಮೊದಲ ಇನ್ನಿಂಗ್ಸ್ನಲ್ಲಿ ೭೬ ರನ್‌ಗಳನ್ನು ನೀಡಿ ೪ ವಿಕೆಟ್ ಪಡೆದಿದ್ದರು. ಒಟ್ಟು ಪಂದ್ಯದಲ್ಲಿ ೧೦ ವಿಕೆಟ್ ಕಿತ್ತು ಭಾರತ ತಂಡದ ಗೆಲುವಿನ ರೂವಾರಿಯಾದರು.
ಸ್ಕೋರ್ ವಿವರ
ಭಾರತ ೪೨೬ ಹಾಗೂ ೧೯೩
ಶ್ರೀಲಂಕಾ ೨೮೪ ಹಾಗೂ ೨೦೬


