LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಇಂದು ಕರ್ನಾಟಕ ಬಂದ್ : ಬೆಂಬಲ ಇಲ್ಲದ ಕಾರಣ ಬಂದ್‌ ಬಹುತೇಕ ವಿಫಲ

Advertisement

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನಿರ್ವಹಣಾ ಪ್ರಾಧಿಕಾರ ನೀಡಿರುವ ಆದೇಶ ಖಂಡಿಸಿ ಹಾಗೂ ಕರ್ನಾಟಕ ಸಮಗ್ರ ಅಭಿವೃದ್ಧಿಗಾಗಿ ಕನ್ನಡ ಪರ ಹಿರಿಯ ಹೋರಾಟಗಾರ ಹಾಗೂ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್‌ ನಾಗರಾಜ್ ನೇತೃತ್ವದಲ್ಲಿ (ಅ.13) ಅಖಂಡ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ.

ಆದರೆ, ಬಹುತೇಕ ಇತರೆ ಕನ್ನಡಪರ ಸಂಘಟನೆಗಳು ಈ ಬಂದ್‌ಗೆ ಬೆಂಬಲ ನೀಡಿಲ್ಲ. ಹೀಗಾಗಿ ಬಂದ್‌ ವಿಫಲವಾಗುವ ಸಾಧ್ಯತೆಗಳು ಹೆಚ್ಚಿವೆ.

ರಾಜ್ಯದಲ್ಲಿ ಸದ್ಯ ಮುಂಗಾರು ಚುರುಕುಗೊಂಡಿರುವ ಕಾರಣ ಸಾರ್ವಜನಿಕರು, ರೈತರು ಹಾಗೂ ಸಣ್ಣಪುಟ್ಟ ವ್ಯಾಪಾರಿಗಳ ಹಿತದೃಷ್ಟಿಯಿಂದ ಈ ಹಿಂದೆ ರಾಜ್ಯ ಬಂದ್‌ಗೆ ಬೆಂಬಲ ಘೋಷಿಸಿದ್ದ ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆಗಳಾದ ಪ್ರವೀಣ್ ಶೆಟ್ಟಿ ಹಾಗೂ ಶಿವರಾಮೇಗೌಡ ಬಣಗಳು ಬಂದ್‌ನಿಂದ ದೂರ ಉಳಿದಿವೆ.

ಬೆಂಗಳೂರು ಹೋಟೆಲ್, ಖಾಸಗಿ ಸಾರಿಗೆ, ಶಾಲಾ ಒಕ್ಕೂಟಗಳು, ಆಟೋ, ಕ್ಯಾಬ್‌ ಮತ್ತಿತರ ಸಂಘಟನೆಗಳು ಕೇವಲ ನೈತಿಕವಾಗಿ ಬೆಂಬಲ ವ್ಯಕ್ತಪಡಿಸಿವೆ. ಹೀಗಾಗಿ ರಾಜ್ಯ ಬಂದ್‌ಗೆ ಒಮ್ಮತ ಮತ್ತು ಒಗ್ಗಟ್ಟಿನ ಕೊರತೆ ಎದ್ದುಕಾಣುತ್ತಿದ್ದು. ಕೆಲವೇ ಸಂಘಟನೆಗಳು ಮಾತ್ರವೇ ವಾಟಾಳ್‌ ಪರವಾಗಿವೆ.

ಹೀಗಾಗಿ ಶುಕ್ರವಾರ ಬಂದ್ ನಡೆದರೂ ಸರ್ಕಾರಿ ಬಸ್‌, ಮೆಟ್ರೋ ಸಂಚಾರ, ಕಚೇರಿಗಳು, ಆಸ್ಪತ್ರೆ, ಶಾಲಾ-ಕಾಲೇಜುಗಳು, ಬ್ಯಾಂಕ್‌, ಚಲನಚಿತ್ರಮಂದಿರ, ವಾಣಿಜ್ಯ ಹಾಗೂ ಸಣ್ಣಪುಟ್ಟ ವ್ಯಾಪಾರ ಚಟುವಟಿಕೆ ಸೇರಿ ಅಗತ್ಯ ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಜನಜೀವನ ಎಂದಿನಂತೆ ಯಥಾಸ್ಥಿತಿಯಲ್ಲಿರಲಿದ್ದು ಸಾರ್ವಜನಿಕರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ.

ಬೆಳಗ್ಗೆ 11ಕ್ಕೆ ಟೌನ್‌ಹಾಲ್‌ನಿಂದ ಮೆರವಣಿಗೆ:

ಈ ನಡುವೆ, ಯಾರೇ ಬೆಂಬಲ ನೀಡಿದರೂ, ನೀಡದಿದ್ದರೂ ರಾಜ್ಯಬಂದ್ ನಡೆಸುವುದಾಗಿ ವಾಟಾಳ್‌ ನಾಗರಾಜ್‌ ಘೋಷಿಸಿದ್ದಾರೆ. ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಶಾಂತಿಯುತವಾದ ಬಂದ್ ನಡೆಯಲಿವೆ. 

ಬೆಂಗಳೂರಿನಲ್ಲಿ ಬೆಳಗ್ಗೆ 11 ಗಂಟೆಗೆ ನಗರದ ಟೌನ್‌ ಹಾಲ್‌ನಿಂದ ಫ್ರೀಡಂಪಾರ್ಕವರೆಗೂ ಮೆರವಣಿಗೆ ನಡೆಸಲಾಗುವುದು. ಕೈಗೊಂಡಿರುವ ರಾಜ್ಯ ಮುಷ್ಕರ ಕೇವಲ ಕಾವೇರಿ ನೀರು ಹಂಚಿಕೆಗೆ ಮಾತ್ರ ಸೀಮಿತವಲ್ಲ. ಬದಲಾಗಿ ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ. ಈ ನಿಟ್ಟಿನಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳು, ವ್ಯಾಪಾರಿಗಳು ಬಂದ್‌ಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜಿಟಿ ತಂಡಕ್ಕೆ ಪಾಂಡ್ಯಾರನ್ನು ನಾಯಕರನ್ನಾಗಿ ಮಾಡಿ ಕರೆತರಲು ಪ್ರಾಂಚೈಸಿ ನಿರಾಕರಣೆಪ್ರೇಯಸಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿದು ಪ್ರಿಯಕರ ನೇಣಿಗೆ ಶರಣು ಕೆಎಎಸ್ ಅಭ್ಯರ್ಥಿಗಳಿಗೆ ಭರ್ಜರಿ ಸುದ್ದಿ : 5 ವರ್ಷಗಳ ವಯೋಮಿತಿ ಸಡಿಲಿಸಿ ರಾಜ್ಯ ಸರ್ಕಾರ ಆದೇಶ ಭಾರತ ಡೆವಿಸ್ ಕಪ್ ಟೆನಿಸ್ ತಂಡಕ್ಕೆ ಮಾನಸ ದಾಮನೆದ್ರುವ್ ಜುರೆಲ್- ಸರಫರಾಜ್ ಖಾನ್ ನಡುವೆ ಪೈಪೋಟಿ ವೆಂಕಟೇಶ್ವರ ಪದವಿ ಮಹಾವಿದ್ಯಾಲಯ ವತಿಯಿಂದ ಬಿ ಎ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಬಿ ಎ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಅಪಘಾನಿಸ್ತಾನ್ ತಂಡಕ್ಕೆ ಸರಣಿ ಜಯವಿಕಾಸಸೌಧದ ಕ್ಯಾಂಟೀನ್ ಮೇಲೆ ದಿಢೀರ್ ದಾಳಿ : ಪ್ಲೇಟ್‌ಗಳ ಮೇಲೆ ಫಂಗಸ್ ಪತ್ತೆ, ಕ್ಯಾಂಟೀನ್ ಬಂದ್ಯತ್ರೀಂದ ಸಿದ್ದರಾಮಯ್ಯ ಅನುಭವ ಇಲ್ಲದ ಮಂಗ : ಎ.ಎಚ್. ವಿಶ್ವನಾಥ್ಕಾಂಗರೂಗಳನ್ನು ಅವರದೇ ನೆಲದಲ್ಲಿ ೧೯೮ ರನ್‌ಗಳಿಗೆ ಆಲೌಟ್ ಮಾಡಿದ ಬಾಂಗ್ಲಾ