ನವದೆಹಲಿ: ಸೆಪ್ಟೆಂಬರ್ ೧೮ ಹಾಗೂ ೧೯ ರಂದು ದಕ್ಷಿಣ ಕೋರಿಯ ವಿರುದ್ಧ ನಡೆಯುವ ಡೆವಿಸ್ ಕಪ್ ಟೆನಿಸ್ ಪಂದ್ಯಾವಳಿಯ ಎರಡನೇ ಸುತ್ತಿನ ಅರ್ಹತಾ ಪಂದ್ಯಗಳಿಗೆ ೧೯ ರ ಹರೆಯದ ಮಾನಸ್ ದಾಮನೆ ಹೊಸದಾಗಿ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಡೆವಿಸ್ ಕಪ್ ಟೆನಿಸ್ ಪಂದ್ಯಾವಳಿಯ ಕೊನೆಯ ೮ ರ ಘಟಕ್ಕೆ ತಲುಪಲು ಎರಡನೇ ಸುತ್ತಿನ ಈ ಅರ್ಹತಾ ಪಂದ್ಯಗಳಲ್ಲಿ ಜಯಿಸುವುದು ಅಗತ್ಯವಾಗಿದ್ದು, ಭಾರತ ತಂಡದಲ್ಲಿ ಇದೊಂದು ಮಹತ್ವದ ಬದಲಾವಣೆಯನ್ನು ಮಾಡಲಾಗಿದೆ.
ವಿಶ್ವ ಟೆನಿಸ್ ರ‍್ಯಾಂಕಿAಗ್‌ನಲ್ಲಿ ೩೬೨ ನೇ ಸ್ಥಾನ ಪಡೆದಿರುವ ಮಾನಸ ದಾಮನೆ ಸಿಂಗಲ್ಸ್ ತಂಡದಲ್ಲಿರುವ ಸುಮೀತ್ ನಾಗಲ್ ಹಾಗೂ ದಕ್ಷಿಣೇಶ್ವರ ಸುರೇಶ ಅವರನ್ನು ಸೇರಿಕೊಳ್ಳುವರು. ಇನ್ನು ಡಬಲ್ಸ್ ವಿಭಾಗದಲ್ಲಿ ಅರ್ನವ ಪಾಪರಕರ ಹಾಗೂ ಸಿದ್ದಾರ್ಥ ರಾವತ್ ಆಡುತ್ತಿದ್ದಾರೆ.


