ಬೆಲ್‌ಪಾಸ್ಟ್(ಐರ್ಯಲೆAಡ್): ಪ್ರವಾಸಿ ನ್ಯೂಜಿಲೆಂಡ್ ಕ್ರಿಕೆಟ್ ತಂಡವು ಐರ್ಯಲೆಂಡ್ ವಿರುದ್ಧ ಇಲ್ಲಿ ನಡೆದಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಗೆಲುವಿನತ್ತ ಮುಖ ಮಾಡಿದೆ.
ಇಲ್ಲಿನ ಸಿವಿಲ್ ಸರ್ವೀಸ್ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ನಡೆದಿರುವ ಪಂದ್ಯದ ಮೂರನೇ ದಿನ ಭೋಜನ ವಿರಾಮದ ವೇಳೆಗೆ ಫಾಲೋ ಆನ್ ಪಡೆದಿರುವ ಐರ್ಯಲೆಂಡ್ ತಂಡವು ೫ ವಿಕೆಟ್‌ಗೆ ೧೩೧ ರನ್‌ಗಳಿಸಿದ್ದು, ಇನ್ನಿಂಗ್ಸ್ ಸೋಲಿನಿಂದ ತಪ್ಪಿಸಿಕೊಳ್ಳಲು ಇನ್ನು ೧೮೦ ರನ್‌ಗಳಿಸಬೇಕಿತ್ತು.
ಸ್ಕೋರ್ ವಿವರ
ನ್ಯೂಜಿಲೆಂಡ್ ಪ್ರಥಮ ಇನ್ನಿಂಗ್ಸ್ ೮ ವಿಕೆಟ್‌ಗೆ ೪೯೦ ಡಿಕ್ಲೇರ್
ಐರ್ಯಲೆಂಡ್ ಪ್ರಥಮ ಇನ್ನಿಂಗ್ಸ್ ೧೭೫
ಐರ್ಯಲೆಂಡ್ ದ್ವಿತೀಯ ಇನ್ನಿಂಗ್ಸ್ (ಫಾಲೋ ಆನ್) ೫ ವಿಕೆಟ್‌ಗೆ ೧೩೧

