ಲಾಡ್ಸ್ : ಇಂಗ್ಲೆಂಡ್ ಕ್ರಿಕೆಟ್ ತಂಡವು ಪಾಕಿಸ್ತಾನ ವಿರುದ್ಧ ಇಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದ ಎರಡನೇ ದಿನದ ಅಂತ್ಯಕ್ಕೆ 261 ರನ್ ಗಳ ಮುನ್ನಡೆ ಪಡೆದಿದ್ದು, ಪಂದ್ಯದ ಮೇಲೆ ಹಿಡಿತ ಸಾಧಿಸುತ್ತಿದೆ.
ಲಾಡ್ಸ್ ಮೈದಾನದಲ್ಲಿ ಎರಡನೇ ದಿನದ ಅಟ ಮುಗಿದಾಗ ಇಂಗ್ಲೆಂಡ್ ತನ್ನ ದ್ವಿತೀಯ ಇನ್ನಿಂಗ್ಸ್ ನಲ್ಲಿ 3 ವಿಕೆಟ್ ಗೆ 81 ರನ್ ಗಳಿಸಿದೆ. ಪಾಕಿಸ್ತಾನ ಮೊದಲ ಇನ್ನಿಂಗ್ಸ್ ನಲ್ಲಿ 110 ರನ್ ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡಿತ್ತು.
ಸ್ಕೊರ್ ವಿವರ
ಇಂಗ್ಲೆಂಡ್ 290 ಹಾಗೂ 3 ವಿಕೆಟ್ ಗೆ 81
ಪಾಕಿಸ್ತಾನ 110


