ನವದೆಹಲಿ: ವೇಟ್ ಲಿಫ್ಟರ್ ಮೀರಾಬಾಯಿ ಚಾನು ಹಾಗೂ ಬಾಕ್ಸಿಂಗ್ ಪಟುಗಾರ್ತಿ ಲೋವಿಂಗಾ ಬೋರೋಗೆಂವ ಅವರು ಜುಲೈ ೨೩ ರಿಂದ ಆರಂಭವಾಗುವ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಭಾರತ ತಂಡವನ್ನು ಮುನ್ನಡೆಸುವರು.
೧೨೪ ಸದಸ್ಯರ ಭಾರತದ ಕ್ರೀಡಾಪಟುಗಳು ಕಾಮನ್‌ವೆಲ್ತ್ ಕೂಟದಲ್ಲಿ ಪಾಲ್ಗೊಳ್ಳುತ್ತಿದ್ದು, ಭಾರತದ ಈ ಖ್ಯಾತ ಕ್ರೀಡಾಪಟುಗಳು ಭಾರತದ ಧ್ವಜ ಹಿಡಿದು ೧೨೪ ಸದಸ್ಯರ ಕ್ರೀಡಾ ನಿಯೋಗವನ್ನು ಮುನ್ನಡೆಸುವರು ಎಂದು ಭಾರತ ಓಲಿಂಪಿಕ್ ಕಮೀಟಿ ಪ್ರಕಟಣೆ ತಿಳಿಸಿದೆ.


