ನ್ಯೂ ಚಂದಿಗಢ: ವೈಭವ್ ಸೂರ್ಯವಂಶಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಇಂದಿಲ್ಲಿ ನಡೆದಿರುವ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ಎಲಿಮಿನೆಟರ್ ಪಂದ್ಯದಲ್ಲಿ ಮತ್ತೊಂದು ನೂತನ ದಾಖಲೆ ಬರೆದರು.
ಒಂದು ಐಪಿಎಲ್ ಪಂದ್ಯಾವಳಿಯ ಋತುವಿನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಕೀರ್ತಿಗೆ ಇಂದು ವೈಭವ್ ಸೂರ್ಯವಂಶಿ ಭಾಜನರಾದರು.
ವೈಭವ್ ಸೂರ್ಯವಂಶಿ ಕೇವಲ ೧೬ ಎಸೆತಗಳಲ್ಲಿ ಅರ್ಧ ಶತಕ ಚಚ್ಚಿದರಲ್ಲದೇ ಐಪಿಎಲ್ ಪಂದ್ಯಾವಳಿಯೊAದರಲ್ಲಿ ೬೦
ಸಿಕ್ಸರ್ ಬಾರಿಸಿ ಪಂದ್ಯಾವಳಿಯೊAದರಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದರು. ಇದಕ್ಕೆ ಮುನ್ನ ಕ್ರಿಸ್ ಗೇಲ್ ಐಪಿಎಲ್ ಪಂದ್ಯಾವಳಿಯಲ್ಲಿ ೨೦೧೬ ರಲ್ಲಿ ೫೯ ಸಿಕ್ಸರ್ ಬಾರಿಸಿದ್ದು, ದಾಖಲೆ ಆಗಿತ್ತು.

