Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮೈಸೂರು ದಸರಾ ದಿನಾಂಕ ಫಿಕ್ಸ್ : ಅಕ್ಟೋಬರ್ 11 ಕ್ಕೆ ಚಾಲನೆ, ಅಕ್ಟೋಬರ್ 21 ಕ್ಕೆ ಜಂಬೂಸವಾರಿ

Advertisement

ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಧಿಕೃತ ದಿನಾಂಕಗಳು ನಿಗದಿಯಾಗಿದ್ದು, ಈ ಬಾರಿ ಅಕ್ಟೋಬರ್ 11 ರಿಂದ ನಾಡಹಬ್ಬ ದಸರಾ ಸಂಭ್ರಮಕ್ಕೆ ಅದ್ಧೂರಿ ಚಾಲನೆ ಸಿಗಲಿದೆ. 

ರಾಜಧಾನಿ ಬೆಂಗಳೂರಿನ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ದಸರಾ ಉನ್ನತ ಮಟ್ಟದ ಸಮಿತಿಯ ಮಹತ್ವದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಹಬ್ಬದ ರೂಪುರೇಷೆಗಳ ಕುರಿತು ಸುದೀರ್ಘ ಚರ್ಚೆ ನಡೆಸಿ ಅಂತಿಮ ಮುದ್ರೆ ಒತ್ತಲಾಗಿದೆ.

ಅಕ್ಟೋಬರ್ 11 ಕ್ಕೆ ಚಾಲನೆ, ಅಕ್ಟೋಬರ್ 21 ಕ್ಕೆ ಜಂಬೂಸವಾರಿ

ನವರಾತ್ರಿ ಆರಂಭದ ಶುಭ ದಿನವಾದ ಅಕ್ಟೋಬರ್ 11 ರಂದು ಮೈಸೂರಿನ ಸಾಂಸ್ಕೃತಿಕ ಪರಂಪರೆಯ ತವರಾದ ಚಾಮುಂಡಿ ಬೆಟ್ಟದಲ್ಲಿ ದಸರಾ ಉತ್ಸವಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಗುವುದು.

ತದನಂತರ ಹತ್ತು ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಸಾಂಗವಾಗಿ ನೆರವೇರಲಿವೆ. ವಿಜಯದಶಮಿಯ ಪಾವನ ದಿನವಾದ ಅಕ್ಟೋಬರ್ 21 ರಂದು ಮೈಸೂರು ಅರಮನೆ ಆವರಣದಲ್ಲಿ ನಾಡದೇವತೆ ತಾಯಿ ಚಾಮುಂಡೇಶ್ವರಿಯ ಚಿನ್ನದ ಅಂಬಾರಿ ಹೊತ್ತ ವಿಶ್ವವಿಖ್ಯಾತ ಜಂಬೂಸವಾರಿ ಮೆರವಣಿಗೆ ಜರುಗಲಿದೆ. ಈ ಅದ್ಭುತ ಕ್ಷಣಕ್ಕೆ ದೇಶ-ವಿದೇಶಗಳ ಲಕ್ಷಾಂತರ ಪ್ರವಾಸಿಗರು ಸಾಕ್ಷಿಯಾಗಲಿದ್ದಾರೆ.

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಾಂಸ್ಕೃತಿಕ ಹಾಗೂ ಕ್ರೀಡೆ ಶಿಕ್ಷಣದ ಮುಖ್ಯ ಅಂಗ:ಬಂಗಾರಿ ಆರ್ ಎಸ್ ಎಸ್ ಸಭೆ ಬಳಿಕ ಏನಾದರೂ ಅನಾಹುತ ಆಗುತ್ತೆ : ಬಿ. ಕೆ ಹರಿಪ್ರಸಾದ್ ಮೈಸೂರು ದಸರಾ ದಿನಾಂಕ ಫಿಕ್ಸ್ : ಅಕ್ಟೋಬರ್ 11 ಕ್ಕೆ ಚಾಲನೆ, ಅಕ್ಟೋಬರ್ 21 ಕ್ಕೆ ಜಂಬೂಸವಾರಿಚೆಕ್ ಬೌನ್ಸ್ ಪ್ರಕರಣ : ಖ್ಯಾತ ನಟ ರಾಜ್‌ಪಾಲ್ ಯಾದವ್ ಗೆ ಚೆಕ್ 3 ತಿಂಗಳ ಜೈಲು ಶಿಕ್ಷೆಮನೆಯಲ್ಲಿ ಪೂಜೆ ಮಾಡಿಸುವ ನೆಪದಲ್ಲಿ ಬಾಬಾರನ್ನೇ ಅಪಹರಿಸಿದ ಕಿರಾತಕರು : 4.25 ಲಕ್ಷ ರೂ. ಲೂಟಿ ಸಂಪುಟ ವಿಸ್ತರಣೆಗೆ ತಮ್ಮ ಮೇಲೆ ಯಾವುದೇ ರೀತಿಯ ಒತ್ತಡ ಇಲ್ಲ : ಡಿ. ಕೆ ಶಿವಕುಮಾರ್ 1 ಲಕ್ಷ ರೂ. ಲಂಚ ಸ್ವೀಕರಿಸಿದ್ದ ತಹಶೀಲ್ದಾರ್ ಗೆ 4 ವರ್ಷ ಜೈಲು ಶಿಕ್ಷೆ, ತಲಾ 20 ಸಾವಿರ ರೂ. ದಂಡಕುತ್ತಿಗೆಗೆ ಜೋಕಾಲಿ ಸೀರೆ ಬಿಗಿದುಕೊಂಡು ಬಾಲಕಿ ಸಾವು ಪ್ರೊ.ಬಿ.ಕೃಷ್ಣಪ್ಪರ ಜಯಂತೋತ್ಸವ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ!ಕೆಸ್ತೂರು ಶಾಲೆಯ ಕಾಂಪೌಂಡ್ ಬಳಿ ಜೋತು ಬಿದ್ದ ವಿದ್ಯುತ್ ತಂತಿ ಪೋಷಕರಲ್ಲಿ ಆತಂಕ