ಲಾರ್ಡ್ಸ್ನಲ್ಲಿ ಇಂಗ್ಲೆAಡ್ ವಿರುದ್ಧ ನಡೆಯುವ ಮೂರನೇ ಹಾಗೂ ಕಡೆಯ ಏಕದಿನ ಪಂದ್ಯವು ಹಿಟ್ ಮ್ಯಾನ್ ರೋಹಿತ್ ಶರ್ಮಾ ಪಾಲಿಗೂ ಕೊನೆಯ ಅಂತಾರಾಷ್ಟಿçÃಯ ಪಂದ್ಯವಾಗಲಿದೆ ಎಂಬ ವದಂತಿ ಮಾಧ್ಯಮಗಳಲ್ಲಿ ಹರಿದಾಡುತ್ತಿರುವುದನ್ನು ಖಂಡಿಸಿರುವ ಬಿಸಿಸಿಐ ಅಂತಹ ಯಾವುದೇ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟ ಪಡಿಸಿದೆ.
ಬಿಸಿಸಿಐ ಕರ‍್ಯದರ್ಶಿ ದೇವಜಿತ್ ಸೈಕಿಯಾ ಈ ಕುರಿತು ಸ್ಪಷ್ಟನೆ ನೀಡಿದ್ದು, ರೋಹಿತ್ ಶರ್ಮಾ ಏಕದಿನ ಕ್ರಿಕೆಟ್ ತಂಡದ ಪ್ರಮುಖ ಭಾಗವಾಗಿದ್ದು, ಅವರು ಏಕದಿನ ತಂಡದ ಭಾಗವಾಗಿ ಉಳಿಯಲಿದ್ದಾರೆ. ರೋಹಿತ್ ನಿವೃತ್ತಿ ಕುರಿತಾದ ಯಾವ ಚರ್ಚೆಗಳು ನಡೆದಿಲ್ಲ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ.


