ಮೊಬೈಲ್ ದುನಿಯಾದಲ್ಲಿ ಈಗ ಚಿಕ್ಕ ಚಿಕ್ಕ ಮಕ್ಕಳ ಕೈಗೂ ಮೊಬೈಲ್ ಕೊಡುವ ಗೀಳು ಮಾಮೂಲಿಯಾಗಿದೆ. ಆದರೆ ಖ್ಯಾತ ಬಾಲಿವುಡ್ ನಟಿ ಹಾಗೂ ಅಭಿಷೇಕ್ ಬಚನ್ ಅವರ ಧರ್ಮ ಪತ್ನಿ ಐಶ್ವರ್ಯ ರೈ ಈ ನಿಟ್ಟಿನಲ್ಲಿ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಐಶ್ವರ್ಯ ರೈ ಅವರು ತಮ್ಮ ಮಗಳು ಆರಾಧ್ಯ ಅವಳನ್ನು ಮೊಬೈಲ್ ಫೋನ್ ಹಾಗೂ ಸೋಸಿಯಲ್ ಮೀಡಿಯಾದಿಂದ ಬಹುದೂರ ಇಟ್ಟಿದ್ದಾರಂತೆ. ಮಕ್ಕಳಿಗೆ ಫೋನ್ ನೀಡಿದರೆ ನಿಜವಾದ ಬಾಲ್ಯತನ ಏನೆಂಬುದು ಮಕ್ಕಳಿಗೆ ತಿಳಿಯುವುದಿಲ್ಲ ಎಂದು ಮನಗಂಡಿರುವ ಐಶ್ವರ್ಯ ಅವರ ನಡೆ ಸಮಾಜಕ್ಕೆ ಮಾದರಿ ಅಲ್ಲವೇ?

