ನವದೆಹಲಿ : ಭಾರತೀಯ ರಸ್ತೆಗಳಲ್ಲಿ ಸಂಚರಿಸುತ್ತಿರುವ ಶೇಕಡ 56ರಷ್ಟು ವಾಹನಗಳು ಮಾನ್ಯವಾದ ವಿಮೆಯನ್ನು ಹೊಂದಿಲ್ಲದಿರುವುದು ತಿಳಿದು ಸುಪ್ರೀಂ ಕೋರ್ಟ್ ತೀವ್ರ ಆಘಾತ ವ್ಯಕ್ತಪಡಿಸಿದೆ.
ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಪಿ.ಕೆ. ಮಿಶ್ರಾ ಅವರನ್ನೊಳಗೊಂಡ ಪೀಠವು, ಪೆಟ್ರೋಲ್ ಬಂಕ್‌ಗಳಲ್ಲಿ ವಾಹನಗಳಿಗೆ ಇಂಧನ ನೀಡುವಿಕೆಯನ್ನು ಅವುಗಳ ವಿಮಾ ಸ್ಥಿತಿಯೊಂದಿಗೆ ಜೋಡಿಸುವ ಕುರಿತು ಪ್ರಾಯೋಜಿತ ಯೋಜನೆಯನ್ನು (Pilot Project) ರೂಪಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಮೋಟಾರು ವಾಹನ ಕಾಯ್ದೆ ಸೆಕ್ಷನ್ 146ರ ಅಡಿಯಲ್ಲಿ ಎಲ್ಲಾ ವಾಹನಗಳು ಮೂರನೇ ವ್ಯಕ್ತಿಯ ವಿಮೆಯನ್ನು ಹೊಂದುವುದನ್ನು ಕಡ್ಡಾಯಗೊಳಿಸಲಾಗಿದೆ.
ರಸ್ತೆ ಸುರಕ್ಷತೆ ಮತ್ತು ಅಪಘಾತ ಸಂತ್ರಸ್ತರಿಗೆ ಪರಿಹಾರ ಖಚಿತಪಡಿಸುವ ನಿಟ್ಟಿನಲ್ಲಿ ಎಎನ್‌ಪಿಆರ್ (ANPR) ಕ್ಯಾಮೆರಾಗಳ ಬಳಕೆ ಹಾಗೂ ವಾಹನ ಮತ್ತು ವಿಮಾ ಪೋರ್ಟಲ್‌ಗಳ ಜೊತೆ ತಂತ್ರಜ್ಞಾನವನ್ನು ಸಂಯೋಜಿಸುವ ಮೂಲಕ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯ ಸೂಚಿಸಿದೆ.


