ಬೆಂಗಳೂರು : ಕೆಪಿಎಸ್‌ಸಿ ಹಗರಣಕ್ಕೆ ಸಂಬಂಧಪಟ್ಟಂತೆ ಇದೀಗ ಬಗೆದಷ್ಟು ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಹಾಗೂ ಬಸವರಾಜ್ ಕನ್ನಾಳೆ ಕಳ್ಳಾಟ ಬಯಲಾಗುತ್ತಿದೆ.
ಜಾನೇಂದ್ರ ಕುಮಾರ್ ಕಂಟ್ರೋಲ್ ನಲ್ಲೆ ಇಡೀ ಹಗರಣ ನಡೆದಿದೆ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಕಂಟ್ರೋಲ್ ನಲ್ಲಿ ಎನ್ನುವುದು ಹಗರಣದ ಪ್ರತಿಯೊಂದು ಮಾಹಿತಿಯನ್ನು ಡೀಲ್ ಆದ 29 ಅಭ್ಯರ್ಥಿಗಳು ಬಿಚ್ಚಿಟ್ಟಿದ್ದಾರೆ.
ಮಧ್ಯವರ್ತಿ ಹಾಗು ಬಿಜೆಪಿ ಮುಖಂಡ ಬಸವರಾಜ್ ಕನ್ನಾಳೆ ಜೊತೆ ಜ್ಞಾನೇಂದ್ರ ಕುಮಾರ್ ಈ ಒಂದು ಅಕ್ರಮ ನಡೆಸಿದ್ದು ಪರೀಕ್ಷಾ ಸಂಬಂಧ ಐದು ಮಾದರಿ ಪ್ರಶ್ನೆ ಪತ್ರಿಕೆ ರೆಡಿಯಾಗುತ್ತಿತ್ತು. ಇದರ ಪೈಕಿ ಒಂದು ಪ್ರಶ್ನೆ ಪತ್ರಿಕೆ ಅಂತಿಮ ಮಾಡಲಾಗುತ್ತಿತ್ತು.
70 ಪ್ರಶ್ನೆಗಳನ್ನು ಜ್ಞಾನೇಂದ್ರ ಕುಮಾರ್ ಕೈಯಿಂದ ಬರೆದುಕೊಳ್ಳುತ್ತಿದ್ದ ಕೈಯಿಂದ ಬರೆದು ಪರೀಕ್ಷೆಗೆ ಎರಡು ದಿನ ಇರುವಾಗ ಪ್ರಶ್ನೆಗಳನ್ನು ಜ್ಞಾನೇಂದ್ರ ಕುಮಾರ್ ಬಸವರಾಜಗೆ ತಲುಪಿಸುತ್ತಿದ್ದ. ಬಳಿಕ ಡೀಲ್ ಆದ ಅಭ್ಯರ್ಥಿಗಳಿಗೆ ನೀಡಲಾಗುತ್ತಿತ್ತು. ಬೆಂಗಳೂರು ತುಮಕೂರು ಆಂಧ್ರಪ್ರದೇಶದೊಳಗೆ ರೆಸಾರ್ಟ್ ನಲ್ಲಿ ತರಬೇತಿ ನೀಡಲಾಗುತ್ತಿತ್ತು.
ಬಸ್ ನಲ್ಲಿ ಕರೆದುಕೊಂಡು ಬಂದು ಎಕ್ಸಾಮ್ ಸೆಂಟರ್ಗೆ ಬರುತ್ತಿದ್ದರು. ಡೀಲರ್ ಅಭ್ಯರ್ಥಿಗಳಲ್ಲಿ ಕೆಲವರು ಸರಿಯಾಗಿ ಪರೀಕ್ಷೆ ಬರೆಯುತ್ತಿರಲಿಲ್ಲ ಡೀಲ್ ಅಭ್ಯರ್ಥಿಗಳು ಎಕ್ಸಾಮ್ ಬರೆದ ಮೇಲೆ ಓ ಎಂ ಆರ್ ಶೀಟ್ ತಿದ್ದುಪಡಿ ಮಾಡಲಾಗುತ್ತಿತ್ತು.
ಅಭ್ಯರ್ಥಿಗಳ omr ಶೀಟ್ ಕೆಲಸ ಜ್ಞಾನೇಂದ್ರ ಕುಮಾರ್ ಮಾಡುತ್ತಿದ್ದ ಓ ಎಂ ಆರ್ ಶೀಟ್ ತಿದ್ದುಪಡಿ ಮಾಡಿ ಮೆರಿಟ್ ಬರುವಂತೆ ಮಾಡುತ್ತಿದ್ದ ಎಕ್ಸಾಮ್ ಪಾಸ್ ಆದ ಅಭ್ಯರ್ಥಿಗಳಿಗೆ ಸಂದರ್ಶನದ ನೀಡಲಾಗುತ್ತಿತ್ತು. ಕೆಪಿಎಸ್ಸಿ ಅಧ್ಯಕ್ಷ ಶಿವಶಂಕರಪ್ಪ ಮುಂದೆ ಸಂದರ್ಶನಕ್ಕೆ ಹಾಜರು ಬಡಿಸಲಾಗುತ್ತಿತ್ತು. 1:3 ರಲ್ಲಿ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗುತ್ತಿದ್ದರು.


