ಸತತ ಸೋಲಿನಿಂದ ಕಂಗೆಟ್ಟಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ಸ್ಥಿತಿ ಮತ್ತಷ್ಟು ಬಿಗಡಾಯಿಸಿದ್ದು, ತಂಡದ ಪ್ರಮುಖ ಬ್ಯಾಟ್ಸಮನ್ ಗಳಾದ ಇನಾಮ್ ಉಲ್ ಹಕ್ ಹಾಗೂ ವಿಕೆಟ್ ಕೀಪರ್ ಬ್ಯಾಟುಗಾರ ಮೊಹ್ಮದ್ ರಿಜವನ್ ಅವರನ್ನು ಸರಣಿಯ ನಡುವೆಯೇ ಪಾಕಿಸ್ತಾನಕ್ಕೆ ಕಳುಹಿಸಲು ನಿರ್ಧಾರ ಮಾಡಲಾಗಿದೆ.
ಹಿರಿಯ ಅಟಗಾರರು ತೋರಿದ ನೀರಸ ಅಟದಿಂದ ಬೇಸತ್ತು ಈ ನಿರ್ಧಾರ ಮಾಡಲಾಗಿದೆ. ಪಾಕಿಸ್ತಾನ ತಂಡವು ಇಂಗ್ಲೆಂಡ್ ವಿರುದ್ಧದ 3 ಟೆಸ್ಟ್ ಗಳ ಸರಣಿಯಲ್ಲಿ ಪಾಕಿಸ್ತಾನ ಮೊದಲೇರಡು ಟೆಸ್ಟ್ ಗಳನ್ನು ಸುಲಭವಾಗಿ ಸೋತಿದೆ.


