ಐಪಿಎಲ್ ೨೦೨೬ ರ ೧೯ ನೇ ಎಡಿಷನ್‌ನ ಪಂದ್ಯಾವಳಿ ನಿರ್ಣಾಯಕ ಘಟ್ಟ ತಲುಪಿದೆ. ೬೨ ಪಂದ್ಯಗಳು ಮುಗಿದ ನಂತರ ಆರ್‌ಸಿಬಿ ತಂಡವು ಪ್ಲೇ ಆಪ್‌ಗೆ ಅರ್ಹತೆ ಪಡೆದ ಮೊದಲ ತಂಡವಾಗಿದೆ.
ಇನ್ನು ಇಂದಿನ ಪಂದ್ಯ ಸೇರಿ ೮ ಲೀಗ್ ಪಂದ್ಯಗಳು ಉಳಿದಿವೆ. ನಾಲ್ಕು ತಂಡಗಳು ಪ್ಲೇ ಆಪ್‌ಗೆ ಅರ್ಹತೆ ಪಡೆಯಲಿದ್ದು, ಇನ್ನುಳಿದ ಮೂರು ಸ್ಥಾನಗಳಿಗೆ ೭ ತಂಡಗಳಿAದ ಪೈಪೋಟಿ ಮುಂದುವರೆದಿದೆ. ಮುಂಬೈ ಇಂಡಿಯನ್ಸ್ ಹಾಗೂ ಲಕ್ನೋ ಸೂಪರ್ ಗೇಂಟ್ಸ್ ತಂಡಗಳು ಪೂರ್ಣವಾಗಿ ಪಂದ್ಯಾವಳಿಯಿAದ ಹೊರ ಬಿದ್ದಿವೆ.
ಗುಜರಾತ್ ಟೈಟನ್ಸ್, ಸನ್‌ರೈಸರ್ಸ್ ಹೈದರಾಬಾದ್, ಪಂಜಾಬ್ ಕಿಂಗ್ಸ್, ರಾಜಸ್ತಾನ್ ರಾಯಲ್ಸ್, ಚೆನ್ನೆöÊ ಸೂಪರ್ ಕಿಂಗ್ಸ್, ಲಕ್ನೋ ಸೂಪರ್ ಗೇಂಟ್ಸ್, ದೆಹಲಿ ಕ್ಯಾಪಿಟಲ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಉಳಿದ ಮೂರು ಪ್ಲೇ ಆಪ್ ಸ್ಥಾನಗಳಿಗೆ ಹೋರಾಟ ನಡೆಸಿವೆ.
ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಗುಜರಾತ್ ಟೈಟನ್ಸ್ ತಂಡವು ೧೩ ಪಂದ್ಯಗಳಿAದ ೧೬ ಅಂಕಗಳಿಸಿದ್ದು, ಇನ್ನೊಂದು ಪಂದ್ಯ ಆಡಬೇಕು. ಗುಜರಾತ್ ಟೈಟನ್ಸ್ ಪ್ಲೇ ಆಪ್ ತಲುಪುವುದು ಬಹುತೇಕ ಖಚಿತ. ಸನ್ ರೈಸರ್ಸ್ ಹೈದರಾಬಾದ್ ೧೨ ಪಂದ್ಯಗಳಿAದ ೧೪ ಅಂಕಗಳಿಸಿ ೩ ನೇ ಸ್ಥಾನದಲ್ಲಿದ್ದು, ಆ ತಂಡದ ಬಳಿಯೂ ಎರಡು ಪಂದ್ಯಗಳು ಬಾಕಿ ಉಳಿದಿವೆ. ಹೀಗಾಗಿ ಎಸ್‌ಆರ್‌ಎಚ್ ಪ್ಲೇ ಆಪ್ ಎಂಟ್ರಿ ಕೂಡ ಬಹುತೇಕ ಖಚಿತ ಎಂದೇ ಹೇಳಬಹುದು. ಇನ್ನೊಂದು ಸ್ಥಾನಕ್ಕಾಗಿ ೫ ತಂಡಗಳು ಹೋರಾಟಕ್ಕೆ ಇಳಿದಂತಾಗಿದೆ. ಈ ಪೈಕಿ ಪಂಜಾಬ್ ಕಿಂಗ್ಸ್ ಸದ್ಯ ೪ ನೇ ಸ್ಥಾನದಲ್ಲಿದೆಯಾದರೂ ಆ ತಂಡದ ಬಳಿ ಒಂದೇ ಒಂದು ಪಂದ್ಯ ಬಾಕಿ ಉಳಿದಿದ್ದು, ಆ ಪಂದ್ಯ ಗೆದ್ದು ನಂತರ ತನಗೆ ಅನುಕೂಲ ಆಗುವಂತೆ ಉಳಿದ ಪಂದ್ಯಗಳ ಫಲಿತಾಂಶಗಳು ಬರಲಿ ಎಂದು ದಾರಿ ಕಾಯುತ್ತ ಕುಳಿತುಕೊಳ್ಳಬೇಕು.
ಇನ್ನು ಸಿಎಸ್‌ಕೆ ಹಾಗೂ ಆರ್‌ಆರ್ ತಂಡಗಳು ತಲಾ ೧೨ ಪಂದ್ಯಗಳಿAದ ತಲಾ ೧೨ ಅಂಕಗಳಿಸಿದ್ದು, ತಮ್ಮ ಮುಂದಿನ ಪಂದ್ಯಗಳನ್ನು ಗೆದ್ದರೆ ಆ ತಂಡಗಳಿಗೂ ಅವಕಾಶ ಉಂಟು. ೧೩ ಪಂದ್ಯಗಳಿAದ ೧೨ ಅಂಕ ಗಳಿಸಿರುವ ದೆಹಲಿ ಕ್ಯಾಪಿಟಲ್ಸ್ ಹಾಗೂ ೧೨ ಪಂದ್ಯಗಳಿAದ ೧೧ ಅಂಕಗಳಿಸಿರುವ ಕೆಕೆಆರ್ ತಂಡಗಳು ಕೂಡ ನಾವು ಪಂದ್ಯ ಗೆಲ್ಲಬೇಕು. ಉಳಿದ ಪಂದ್ಯಗಳು ಫಲಿತಾಂಶಗಳು ನಾವು ಅಂದುಕೊAಡAತೆ ಬರಬೇಕು ಎಂಬ ಲೆಕ್ಕಾಚಾರದಲ್ಲಿಯೇ ತಲೆ ಕೆಡಿಸಿಕೊಂಡು ಕುಳಿತಿವೆ.

