ಸಿಂಧನೂರು : ನೀಟ್ ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆ ಅಕ್ರಮ ಖಂಡಿಸಿ,ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ,ಪರಿಸರ, ಮಾನವ ಹಕ್ಕುಗಳ ಹೋರಾಟಗಾರ ಸೋನಮ್ ವಾಂಗ್ಚುಕ್ ಹಾಗೂ ವಿದ್ಯಾರ್ಥಿಗಳ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಬೆಂಬಲಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ನಗರದ ತಹಸಿಲ್ ಕಚೇರಿಯ ಮುಂದೆ ಶುಕ್ರವಾರ ಧರಣಿ ಸತ್ಯಾಗ್ರಹ ನಡೆಸಿ, ಶಿರಸ್ತೆದಾರ್ ಅಂಬಾದಾಸ್ ಅವರ ಮೂಲಕ ವಿವಿಧ ಹಕ್ಕೊತ್ತಾಯಗಳ ಮನವಿಪತ್ರವನ್ನು ರಾಷ್ಟಪತಿಗಳಿಗೆ ರವಾನಿಸಲಾಯಿತು.
ಕಳೆದ19 ದಿನಗಳಿಂದ ಸೋನಮ್ ವಾಂಗ್ಚುಕ್ ಮತ್ತು ಉಪವಾಸ ನಿರತ ಇತರ ಪ್ರತಿಭಟನಾಕಾರರ ಆರೋಗ್ಯ ದಿನದಿಂದ ದಿನಕ್ಕೆ ಗಣನೀಯವಾಗಿ ಹದಗೆಡುತ್ತಿದ್ದರೂ ಕೇಂದ್ರ ಸರ್ಕಾರದ ಯಾವೊಬ್ಬ ಪ್ರತಿನಿಧಿಯೂ ಸತ್ಯಾಗ್ರಹಿಗಳ ಬೇಡಿಕೆಗಳನ್ನು ಆಲಿಸದೇ ಇರುವುದು ಗಮನಿಸಿದರೆ ಫ್ಯಾಸಿಸ್ಟ್ ಸರ್ಕಾರದ ಜೀವ ವಿರೋಧಿ ನೀತಿಗೆ ಸ್ಪಷ್ಟ ಸಾಕ್ಷಿಯಾಗಿದೆ. ಪ್ರಜಾಪ್ರಭುತ್ವದ ಹಕ್ಕುಗಳನ್ನು ಚಲಾಯಿಸುವ ನಾಗರಿಕರಿಗೆ ಯಾವುದೇ ಬೆಲೆ ಇಲ್ಲದಂತಾಗಿದೆ ಮಹಾರಾಷ್ಟ ಮೂಲದ ಸದಸ್ಯನೇ ಪ್ರಶ್ನೆ ಪತ್ರಿಕೆಯನ್ನು ಖಾಸಗಿ ಕೋಚಿಂಗ್ ಸೆಂಟರ್ರೊಂದಕ್ಕೆ ಮಾರಾಟ ಮಾಡಿದ್ದು ನೀಟ್ ಪರೀಕ್ಷಾ ಅಕ್ರಮ 22ಲಕ್ಷ ವಿದ್ಯಾರ್ಥಿಗಳನ್ನು ಮಾನಸಿಕ ಖಿನ್ನತೆಗೆ ದೂಡಿದೆ.ಅಲ್ಲದೇ ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಕನಸನ್ನು ನುಚ್ಚುನೂರು ಮಾಡಿದೆ. ಇದೊಂದು ಬಹುದೊಡ್ಡ ಹಗರಣವಾಗಿದ್ದು, ವಿದ್ಯಾರ್ಥಿಗಳ ಬೇಡಿಕೆಗಳನ್ನಿಟ್ಟುಕೊಂಡು ಮಾನವ ಹಕ್ಕುಗಳ ಹೋರಾಟಗಾರ ಸೋನಮ್ ವಾಂಗ್ಚುಕ್ ಮತ್ತು ವಿದ್ಯಾರ್ಥಿಗಳು ಕಳೆದ 19 ದಿನಗಳಿಂದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದು, ಕನಿಷ್ಠ ಸೌಜನ್ಯಕ್ಕಾದರೂ ಕೇಂದ್ರ ಸರ್ಕಾರ ಅವರ ಅಹವಾಲನ್ನು ಆಲಿಸಿಲ್ಲ ಪ್ರಧಾನಿ ಮೋದಿಯವರು ದೇಶ ದೇಶ ಸುತ್ತುತ್ತಿದ್ದಾರೆ ಆದರೆ ಪ್ರಸ್ತುತ ಬಿಜೆಪಿ ಸರ್ಕಾರದಲ್ಲಿನ ಸಚಿವರ,ಅಧಿಕಾರಿಗಳ ದರ್ಪ,ದೌರ್ಜನ್ಯ ನೋಡಿದರೆ, ಈ ದೇಶದ ಜನರ ಬಗ್ಗೆ ಅವರಿಗೆ ಕಿಂಚಿತ್ತೂ ಕಾಳಜಿ ಇಲ್ಲ ಎಂಬುದು ಅರ್ಥವಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.
ಸಂದರ್ಭದಲ್ಲಿ: ಚಂದ್ರಶೇಖರ ಗೊರೆಬಾಳ. ಬಸವಂತರಾಯ ಗೌಡ.
ಜಮಾಅತೆ ಇಸ್ಲಾಂ ಹುಸೇನ್‌ಸಾಬ್, ವೆಂಕನಗೌಡ ಗದ್ರಟಗಿ, ಡಿ.ಎಚ್.ಕಂಬಳಿ, ಎಸ್. ದೇವೇಂದ್ರ ಗೌಡ. ಅಶೋಕ್ ನಂಜಲದಿನ್ನಿ. ಭಾಷಾ ಮಿಯಾ. ಅಮಿನ ಭಾಷಾ ದಿದ್ದಿಗಿ. ನಾಗರಾಜ್ ಪೂಜಾರ್, ಚಿಟ್ಟಿಬಾಬು. ಬಸವರಾಜ ಬಾದರ್ಲಿ, ಗಂಗಮ್ಮ ಗೊರಬಾಳ, ಸರಸ್ವತಿ ಪಾಟೀಲ್, ಶಕುಂತಲಾ ಪಾಟೀಲ್. ಬಸವರಾಜ ಕೊಂಡೆ ಖಾಸಿಂಸಾಬ್ ಕಾರ್ಪೆಂಟರ್. ಸೇರಿದಂತೆ ಇನ್ನಿತರರು ಇದ್ದರು.
ವರದಿ : ಬಸವರಾಜ ಬುಕ್ಕನಹಟ್ಟಿ.


