Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸದಲಗಾದಲ್ಲಿ ಶಿಕ್ಷಣ ಪ್ರೇಮಿಗಳ ಸೇವಾ ಸಂಘದಿಂದ ವಿದ್ಯಾ ದಾಸೋಹ ಕಾರ್ಯಕ್ರಮ

Advertisement

ಚಿಕ್ಕೋಡಿ : ತಾಲೂಕಿನ ಸದಲಗಾ ಶಿಕ್ಷಣ ಪ್ರೇಮಿಗಳ ಸೇವಾ ಸಂಘದಿಂದ ವಿದ್ಯಾ ದಾಸೋಹ ಕಾರ್ಯಕ್ರಮ: ಶೈಕ್ಷಣಿಕ ಸಾಮಗ್ರಿಗಳ ವಿತರಣೆ
ಸದಲಗಾ, ಶಿಕ್ಷಣ ಪ್ರೇಮಿಗಳ ಸೇವಾ ಸಂಘ, ಸದಲಗಾ ವತಿಯಿಂದ ಸತತ ಐದನೇ ವರ್ಷ ಸರ್ಕಾರಿ ಪ್ರೌಢಶಾಲೆ ಹಾಗೂ ಕುವೆಂಪು ಶತಮಾನೋತ್ಸವ ಮಾದರಿ ಶಾಲೆಯ ವಿದ್ಯಾರ್ಥಿಗಳಿಗೆ ವಿದ್ಯಾ ದಾಸೋಹ ಕಾರ್ಯಕ್ರಮದ ಅಂಗವಾಗಿ ಶೈಕ್ಷಣಿಕ ಸಾಮಗ್ರಿಗಳನ್ನು ವಿತರಿಸಲಾಯಿತು.

ಈ ಕಾರ್ಯಕ್ರಮ ಪರಮ ಪೂಜ್ಯ ಡಾ. ಶ್ರದ್ಧಾನಂದ ಮಹಾಸ್ವಾಮಿಗಳು, ಗೀತಾ ಆಶ್ರಮ ಸದಲಗಾ, ಪರಮ ಪೂಜ್ಯ ಶಿವಪ್ರಸಾದ್ ದೇವರು, ಉತ್ತರಾಧಿಕಾರಿಗಳು, ಚಿಂಚಣಿ ಸಿದ್ಧ ಸಂಸ್ಥಾನ ಮಠ ಹಾಗೂ ಶ್ರೀಮತಿ ಅಕ್ಷಾಯಣಿ ಪ್ರಧಾನೆ ಅವರ ಸಾನ್ನಿಧ್ಯದಲ್ಲಿ ನಡೆಯಿತು.
ಇದೇ ಸಂದರ್ಭದಲ್ಲಿ 2025–26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 95% ಅಂಕಗಳನ್ನು ಗಳಿಸಿ ಶಾಲೆಗೆ ಕೀರ್ತಿ ತಂದ ಪ್ರತಿಭಾವಂತ ವಿದ್ಯಾರ್ಥಿ ಉಮೇಶ್ ಚಿಂಚಲಿ ಅವರನ್ನು ಸನ್ಮಾನಿಸಲಾಯಿತು.

ವಿದ್ಯಾರ್ಥಿಗಳಿಗೆ  ನೋಟ್‌ಬುಕ್‌ಗಳು, ಶಾಲಾ ಸಮವಸ್ತ್ರ ಸೇರಿದಂತೆ ವಿವಿಧ ಶೈಕ್ಷಣಿಕ ಸಾಮಗ್ರಿಗಳನ್ನು ವಿತರಿಸಲಾಯಿತು. ಸರಸ್ವತಿ ಪೂಜೆ ಹಾಗೂ ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ವಿದ್ಯಾರ್ಥಿನಿಯರು ಸ್ವಾಗತ ಗೀತೆಯನ್ನು ಹಾಡಿದರು.
ಕಾರ್ಯಕ್ರಮದಲ್ಲಿ . ಶ್ರದ್ಧಾನಂದ ಮಹಾಸ್ವಾಮಿಗಳು, ಶಿವಪ್ರಸಾದ್ ದೇವರು, . 
ಶ್ರೀಮತಿ ಆಕ್ಷಾಯಣಿ ಪ್ರಧಾನೆ, . ವೈ.ಎಸ್. ಕೋಳಿ, 
 ಎಸ್.ಎಸ್. ಗೌಂಡಿ  ಮುಖ್ಯೋಪಾಧ್ಯಾಯ  ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಎ.ಎಸ್.ಐ. ವೈ.ಎಸ್. ಕೋಳಿ, ವಿದ್ಯಾರ್ಥಿಗಳು ಯಾವುದೇ ದುಶ್ಚಟಗಳಿಗೆ ಬಲಿಯಾಗಬಾರದು, 18 ವರ್ಷ ಪೂರ್ಣಗೊಳ್ಳುವವರೆಗೆ ವಾಹನ ಚಾಲನೆ ಮಾಡಬಾರದು ಹಾಗೂ ಮೊಬೈಲ್‌ನಲ್ಲಿನ ಸಾಮಾಜಿಕ ಜಾಲತಾಣಗಳಿಂದ ದೂರವಿದ್ದು ವಿದ್ಯಾಭ್ಯಾಸದತ್ತ ಗಮನಹರಿಸಬೇಕು ಎಂದು ಸಲಹೆ ನೀಡಿದರು.

ಶಿವಪ್ರಸಾದ್ ದೇವರು ಮಾತನಾಡಿ, "ಅನ್ನವು ಕ್ಷಣಿಕ ತೃಪ್ತಿಯನ್ನು ನೀಡುತ್ತದೆ. ಆದರೆ ಗುರುಗಳಿಂದ ದೊರೆಯುವ ಜ್ಞಾನವು ಜೀವನಪೂರ್ತಿ ಉಪಯೋಗಕ್ಕೆ ಬರುತ್ತದೆ" ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಎಸ್.ಎಸ್. ಗೌಂಡಿ, ಮಹಾವೀರ ಹುದ್ದಾರ,  ಆಕ್ಷಾಯಣಿ ಪ್ರಧಾನೆ, ಶ್ರದ್ಧಾನಂದ ಮಹಾಸ್ವಾಮಿಗಳು ಹಾಗೂ ಚಿದಾನಂದ ಸರವಡೆ ತಮ್ಮ ಮನೋಗತವನ್ನು ವ್ಯಕ್ತಪಡಿಸಿದರು.

ಮಹಾದೇವ ಕೊಲ್ಹಾಪುರೆ ಸ್ವಾಗತಿಸಿದರು. ಕುಮಾರ ಹೊನ್ನಾಯಕ ಅತಿಥಿಗಳನ್ನು ಪರಿಚಯಿಸಿದರು. ಸೌ. ಗೀತಾ ಮಹಾಜನ್ ಕಾರ್ಯಕ್ರಮ ನಿರೂಪಿಸಿದರು. ಎಸ್.ಎಂ. ಬಾಳೀಕಾಯಿ ವಂದಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಪ್ರೇಮಿಗಳ ಸೇವಾ ಸಂಘದ ಸದಸ್ಯರಾದ ಕೆ. ಬಿ. ಹೊನ್ನಾಯಿಕ, ಮಹಾದೇವ ಕೊಲ್ಹಾಪುರೆ, ಮಹಾವೀರ ಹುದ್ದಾರ, ಶ್ರೀಮತಿ ಮಂಗಲ ಖೋತ್, ಚಿದಾನಂದ ಸರವಡೆ, ಶ್ರೀಮತಿ ಅಕ್ಷಾಯಣಿ ಪ್ರಧಾನೆ, ಅಭಯಕುಮಾರ ಪಾಟೀಲ, ಅತೀಶಕುಮಾರ್ ಹಜಾರೆ, ಶ್ರೀಮತಿ ಶೋಭಾ ಯಮಕನಮರ್ಡಿ, ಶ್ರೀ ಬಾಹುಬಲಿ ನರವಾಡೆ, ಶ್ರೀಮತಿ ಮಹಾದೇವಿ ಹಾಲಪ್ಪನವರ ಸೇರಿದಂತೆ ಶಿಕ್ಷಕರು, ಶಿಕ್ಷಕಿಯರು, ವಿದ್ಯಾರ್ಥಿಗಳು ಹಾಗೂ ಪಾಲಕರು ಉಪಸ್ಥಿತರಿದ್ದರು.

ವರದಿ : ರಾಜು ಮುಂಡೆ 

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST