ಸಿಂಧನೂರು : ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಶಾಸಕ ಹಂಪನಗೌಡ ಬಾದರ್ಲಿ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನಮಾನ ನೀಡಲು ಅವರ ಬೆಂಬಲಿಗರು ಮತ್ತು ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಪ್ರವಾಸಿ ಮಂದಿರ ದಿಂದ ಮಹಾತ್ಮ ಗಾಂಧಿ ವೃತ್ತದ ವರೆಗೆ ಬೃಹತ್ ರ್ಯಾಲಿಯ ಮೂಲಕ ಶಾಸಕ ಹಂಪನಗೌಡರ ಭಾವಚಿತ್ರಇಡಿದು ರಸ್ತೆ ಯುದ್ಧಕ್ಕೂ ಹಂಪನಗೌಡರ ಪರ ಘೋಷಣೆ ಕೂಗುತ್ತಾ ಮಹಾತ್ಮ ಗಾಂಧಿ ಪ್ರತಿಭೆಗೆ ಹೂಮಾಲೆ ಹಾಕಿ ಮಾತನಾಡಿದ ಅವರು ಶಾಸಕ ಹಂಪನಗೌಡರು ಸಿಂಧನೂರು ವಿಧಾನಸಭಾ ಕ್ಷೇತ್ರದಿಂದ 5 ಬಾರಿ ಶಾಸಕರಾಗಿದ್ದು ಹಿಂದೆ ಸಿದ್ದರಾಮಯ್ಯನವರ ಸರ್ಕಾರದ ಸಚಿವ ಸಂಪುಟದಲ್ಲಿ ಸ್ಥಾನ ಕೈತಪ್ಪಿತ್ತು, ಈಗ ಡಿಕೆ. ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ನಮ್ಮ ಸಿಂಧನೂರು ಕ್ಷೇತ್ರದ ಹಂಪನಗೌಡ ಬಾದರ್ಲಿ ಅವರಿಗೆ ಸಚಿವ ಸಂಪುಟದಲ್ಲಿ ಸೂಕ್ತವಾದ ಸ್ಥಾನಮಾನ ಕೊಡಬೇಕು ಕಲ್ಯಾಣ ಕರ್ನಾಟಕ ಭಾಗದಲ್ಲಿ ಲಿಂಗಾಯತ ಸಮಾಜದ ಏಕೈಕ ಪ್ರಭಾವಿ, ಅನುಭವಿ ರಾಜಕಾರಣಿ ಈ ಬಾರಿ ಅವರಿಗೆ ಸಚಿವ ಸ್ಥಾನ ನೀಡಿದರೆ ಮುಂಬರುವ 2028 ರ ಚುನಾವಣೆಯಲ್ಲಿ ದೊಡ್ಡ ಶಕ್ತಿ ಬರುತ್ತದೆ ಎಂದು ಅವರ ಬೆಂಬಲಿಗರು ಮತ್ತು ಅಭಿಮಾನಿಗಳು ಬೃಹತ್ ಪ್ರತಿಭಟನೆ ನಡೆಸಿ ರಾಜ್ಯ ವರಿಷ್ಠರ ಗಮನ ಸೆಳೆದರು.
ಈ ಸಂದರ್ಭದಲ್ಲಿ : ರಾಜಶೇಖರ್ ಪಾಟೀಲ್. ಕಾಜಿ ಮಲ್ಲಿಕ್. ಲಿಂಗಪ್ಪ ದಡೆಸುಗೂರು. ಅನಿಲ್ ಕುಮಾರ್ ವೈ. ಶೇಖರಪ್ಪ ಗಿಣಿವಾರ. ನರೇಂದ್ರ ನಾಥ್. ಆರ್. ತಿಮ್ಮಯ್ಯ ನಾಯಕ. ಶಫಿ ಉಲ್ಲಾಖಾನ್. ಮರಿಯಪ್ಪ ಜಾಲಿಹಾಳ. ಅಶೋಕ್ ಉಮಾಲೂಟಿ. ಸೋಮನಾಥ ಸೂಲಂಗಿ. ಬಸವರಾಜ ಸಾಹುಕಾರ್ ಸತ್ಯನಾರಾಯಣ. ನರಸಪ್ಪ ಕಟ್ಟಿಮನಿ. ಮಲ್ಲನಗೌಡ ಮಾವಿನ ಮಡುಗು. ಆರ್ ಸಿ ಪಾಟೀಲ್. ಸಿದ್ದನಗೌಡ ವೀರಪಾಪುರ. ಹನುಮಂತ ಗೋಮರ್ಷಿ. ಅಯ್ಯಪ್ಪ ವಕೀಲರು. ಬಸವರಾಜ ನಿಟ್ಟೂರು ಸೇರಿದಂತೆ ಅನೇಕ ಕಾರ್ಯಕರ್ತರು ಅಭಿಮಾನಿಗಳು ಭಾಗವಹಿಸಿದ್ದರು.
ವರದಿ : ಬಸವರಾಜ ಬುಕ್ಕನಹಟ್ಟಿ.

