ಲಕ್ನೋ: ಕ್ವಾಲಿಫಾಯರ್-೪ ನೇ ಹಾಗೂ ಕಡೆಯ ಸ್ಥಾನಕ್ಕೆ ಶತಾಯ-ಗತಾಯ ಯತ್ನಿಸಲಿರುವ ಪಂಜಾಬ್ ಕಿಂಗ್ಸ್ ತಂಡ ಹಾಗೂ ಆಗಲೇ ಪಂದ್ಯಾವಳಿಯಿAದ ಹೊರ ಹೋಗಿರುವ ಲಕ್ನೋ ಸೂಪರ್ ಜೇಂಟ್ಸ್ ತಂಡಗಳು ಇಂದಿಲ್ಲಿ ನಡೆಯುವ ಐಪಿಎಲ್ ಪಂದ್ಯಾವಳಿಯ ೬೮ ನೇ ಪಂದ್ಯದಲ್ಲಿ ಎದುರಾಗಲಿವೆ.
ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂಗಣದಲ್ಲಿ ಪಂದ್ಯ ಸಾಯಂಕಾಲ ೭:೩೦ ಕ್ಕೆ ಆರಂಭವಾಗಲಿದೆ. ೧೩ ಪಂದ್ಯಗಳಿAದ ೧೩ ಅಂಕಗಳಿಸಿರುವ ಪಂಜಾಬ್ ಕಿಂಗ್ಸ್ ತಂಡವು ಇಂದಿನ ಪಂದ್ಯ ಗೆದ್ದರೆ ೧೫ ಅಂಕಗಳಿಸಿ ಕ್ವಾಲಿಫಾಯರ್-೪ ನೇ ಸ್ಥಾನಕ್ಕೆ ಬರಲಿದೆ. ನಂತರ ಆರ್‌ಆರ್ ತನ್ನ ಕಡೆಯ ಪಂದ್ಯವನ್ನು ಸೋತರೇ ಮಾತ್ರ ಪಂಜಾಬ್ ಕಿಂಗ್ಸ್ಗೆ ಲಾಭ.
ರಾಜಸ್ತಾನ್ ರಾಯಲ್ಸ್ ತನ್ನ ಕಡೆಯ ಲೀಗ್ ಪಂದ್ಯದಲ್ಲಿ ಗೆದ್ದರೆ ಆ ತಂಡದ ಅಂಕಗಳು ೧೬ ಕ್ಕೆ ಹೆಚ್ಚಿ ೪ ನೇ ತಂಡವಾಗಿ ಕ್ವಾಲಿಫಾಯರ್ ಆಗುವುದು. ಹೀಗಾಗಿ ಇಂದು ಪಂಜಾಬ್ ಕಿಂಗ್ಸ್ ತನ್ನ ಕಡೆಯ ಪಂದ್ಯವನ್ನು ಗೆದ್ದು ಆರ್‌ಆರ್‌ನ ಕಡೆಯ ಪಂದ್ಯದತ್ತ ಕಣ್ಣಿಟ್ಟು ಕುಳಿತುಕೊಳ್ಳಬೇಕು.

