ಗಾಯಗೊಂಡಿರುವ ಸಾಯಿ ಸುದರ್ಶನ ಬದಲಿ ಆಟಗಾರರಾಗಿ ಬಲಗೈ ಪ್ರತಿಭಾವಂತ ಬ್ಯಾಟ್ಸಮನ್ ಸರಫರಾಜ್ ಖಾನ್ ಶ್ರೀಲಂಕಾದಲ್ಲಿರುವ ಭಾರತ ಕ್ರಿಕೆಟ್ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಟೀಮ್ ಮ್ಯಾನೆಜ್‌ಮೆಂಟ್ ಪ್ರಕಟಣೆ ತಿಳಿಸಿದೆ.
ಸಾಯಿ ಸುದರ್ಶನ ಸಂಪೂರ್ಣವಾಗಿ ಫಿಟ್ನೇಶ್ ಪಡೆಯುವಲ್ಲಿ ವಿಫಲರಾದ ಹಿನ್ನೆಲೆಯಲ್ಲಿ ಟೀಮ್ ಮ್ಯಾನೆಜ್‌ಮೆಂಟ್ ಈ ನಿರ್ಧಾರ ಕೈಗೊಂಡಿದೆ. ಶ್ರೀಲಂಕಾದಲ್ಲಿರುವ ಭಾರತ ಕ್ರಿಕೆಟ್ ತಂಡವು ಪ್ರಥಮ ಟೆಸ್ಟ್ಗಾಗಿ ಗಾಲೆಗೆ ತೆರಳುವ ಮುನ್ನವೇ ಸರಫರಾಜ್ ಖಾನ್ ಭಾರತ ತಂಡವನ್ನು ಸೇರಲಿದ್ದಾರೆ.


