LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಸಿಂಧನೂರು ಶಾಸಕ  ಹಂಪನಗೌಡ ಬಾದರ್ಲಿರವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಬೃಹತ್ ಪ್ರತಿಭಟನೆ

Advertisement


ಮಾನ್ವಿ: ಪಟ್ಟಣದ ಒಳಬಳ್ಳಾರಿ ಶ್ರೀ ಚನ್ನಬಸವ ಶಿವಯೋಗಿ ತಾತಾನವರ ಉಚಿತ ಪ್ರಸಾದ  ನಿಲಯದ ಆವರಣದಲ್ಲಿನ ತಾಲೂಕು ವೀರಶೈವ ಲಿಂಗಾಯತ ಸಮಾಜದ ಕಚೇರಿಯ ಆವರಣದಲ್ಲಿ ಸಿಂಧನೂರು ಶಾಸಕ  ಹಂಪನಗೌಡ ಬಾದರ್ಲಿರವರಿಗೆ ಸಚಿವ ಸ್ಥಾನ ನೀಡಲು ಆಗ್ರಹಿಸಿ ರಾಯಚೂರಿನಲ್ಲಿ ಸೋಮವಾರ ವೀರಶೈವ ಲಿಂಗಾಯತ ಸಮಾಜದಿಂದ ಹಮ್ಮಿಕೊಂಡ ಬೃಹತ್  ಪ್ರತಿಭಟನಾ ಮೆರವಣಿಯ ಪೂರ್ವಭಾವಿ ಸಭೆಯಲ್ಲಿ ಸಿಂಧನೂರಿನ ವೀರಶೈವ ಲಿಂಗಾಯತ ಸಮಾಜದ ಮುಖಂಡರಾದ ಶ್ರೀ ಬಾಬುಗೌಡ ಬಾದರ್ಲಿ ಮಾತನಾಡಿ ಜಿಲ್ಲೇಯ ವೀರಶೈವ ಲಿಂಗಾಯತ ಸಮಾಜದ ಹಿರಿಯ ಮುತ್ಸಾದಿ ಹಾಗೂ 5 ಬಾರಿ ಶಾಸಕರಾಗಿ ಆಯ್ಕೆಯಾಗಿ ಜನರ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಸಿಂಧನೂರು ಹಿರಿಯ ಶಾಸಕ ಹಂಪನಗೌಡ ಬಾದರ್ಲಿಯವರಿಗೆ ಸಚಿವ ಸ್ಥಾನವನ್ನು ರಾಜ್ಯದ ಮುಖ್ಯಮಂತ್ರಿಗಳು ಈ ಬಾರಿ ನೀಡುತ್ತಾರೆ ಎನ್ನುವ ವಿಶ್ವಾಸ ಈ ಭಾಗದ ಸಮಾಜದ ಮುಖಂಡರಿಗೆ ಇತ್ತು ಅದ್ದರೆ ಈ ಬಾರಿ ಕೂಡ ರಾಜ್ಯದಲ್ಲಿನ ಕಾಂಗ್ರೇಸ್ ನೇತೃತ್ವದ ಸರಕಾರದಲ್ಲಿ ಶಾಸಕ ಹಂಪನಗೌಡ ಬಾದರ್ಲಿಯವರಿಗೆ ಸಚಿವ ಸ್ಥಾನ ನೀಡಿಲ್ಲದೆ ಇರುವುದನ್ನು ಖಂಡಿಸಿ ಸೋಮವಾರ ರಾಯಚೂರು ನಗರದಲ್ಲಿ ವೀರಶೈವ ಲಿಂಗಾಯತ ಸಮಾಜದಿಂದ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಮುಖಂಡರು ಜನಪ್ರತಿನಿಧಿಗಳು ಭಾಗವಹಿಸುವಂತೆ ಮನವಿ ಮಾಡಿಕೊಂಡರು. 
ತಾಲೂಕು ವೀರಶೈವ ಲಿಂಗಾಯತ ಸಮಾಜದ ತಾಲೂಕು ಅಧ್ಯಕ್ಷರಾದ ಹರಿಹರ ಪಾಟೀಲ್ ಮಾತನಾಡಿ ವೀರಶೈವ ಲಿಂಗಾಯತ ಸಮಾಜದ ಹಿರಿಯ ಶಾಸಕ ಹಂಪನಗೌಡ ಬಾದರ್ಲಿ  ರವರಿಗೆ ಸಚಿವ ಸ್ಥಾನ ನೀಡುವಂತೆ ಹಾಗೂ ರಾಯಚೂರು ಜಿಲ್ಲೇಗೆ ರಾಜ್ಯ ಸರಕಾರದಲ್ಲಿ ಪ್ರತಿನಿಧ್ಯ ನೀಡದೆ ಇರುವುದು ಜಿಲ್ಲೆಗೆ ಸಚಿವ ಸ್ಥಾನ ವಂಚಿತವಾಗಿರುವುದಕ್ಕೆ ನಡೆಯುವ ಪ್ರತಿಭಟನೆಯಲ್ಲಿ ತಾಲೂಕು ವೀರಶೈವ ಲಿಂಗಾಯತ ಸಮಾಜ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಸಮಿತಿ ಮಾನ್ವಿ ಸೇರಿದಂತೆ  ಪಕ್ಷಾತೀತವಾಗಿ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ರಾಯಚೂರು ವೀರಶೈವ ಬಿ.ಎಡ್,ಕಾಲೇಜ್ ಈಶ್ವರ ದೇವಸ್ಥಾನದ  ಹತ್ತಿರ ಸೋಮವಾರ ಬೆಳಿಗೆ 10.30ಕ್ಕೆ ಆಗಮಿಸಿ ಪ್ರತಿಭಟನೆಯನ್ನು ಯಶಸ್ವಿಗೊಳಿಸುವಂತೆ ಕೋರಿದರು. 
ತಾಲೂಕು ವೀರಶೈವ ಲಿಂಗಾಯತ ಸಮಾಜದ ಮುಖಂಡರಾದ ತಿಮ್ಮರೆಡ್ಡಿ ಭೋಗವತಿ, ವೀರನಗೌಡ ವಕೀಲರು,ಡಿ.ಬಸವನಗೌಡ,ಶರಣೆಗೌಡ ನಕ್ಕುಂದಿ, ಮಲ್ಲನಗೌಡ, ರಾಮನಗೌಡ, ರುದ್ರಗೌಡ, ಡಾ. ಮಲ್ಲಿಕಾರ್ಜುನ ,ಶಂಕರಗೌಡ, ರಾಜಶೇಖರಸ್ವಾಮಿ ,ಅಮರೇಗೌಡಜಾನೆಕಲ್, ಹಂಪ್ಪಣ್ಣ, ಶರಣಪ್ಪ ಕಾಮರೆಡ್ಡಿ, ಮಲ್ಲೇಯ್ಯ ಗಣೇಕಲ್, ಅಮರೇಗೌಡ ಉಮಳಿಹೋಸೂರು, ಮಲ್ಲೇಶಪ್ಪ, ಈಶಪ್ಪ, ಆರ್.ವಿರೇಶಸ್ವಾಮಿ ರೌಡೂರು, ಮಲ್ಲಿಕಾರ್ಜುನ ವಕೀಲರು, ಬಸವನಗೌಡ.ಡಿ, ಹನುಮಪ್ಪಗೌಡ,ಅಮರೇಗೌಡ ಸಂಗಪೂರ್, ಬಸವರಾಜ ಹಾಲಪುರ್ ,ಸಿದ್ದರಾಮರೆಡ್ಡಿ ,ಶರಣಪ್ಪ ಮಾಸ್ಟರ್, ಸಿದ್ದರಾಮರೆಡ್ಡಿ, ಮೇಟಿಶಂಕ್ರಪ್ಪ, ಮಲ್ಲಿಕಾರ್ಜುನ. ಸೇರಿದಂತೆ ತಾಲೂಕಿನ ವೀರಸೈವ ಲಿಂಗಾಯತ ಸಮಾಜದ ಮುಖಂಡರು ಭಾಗವಹಿಸಿದರು.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST