ಕೊಲಂಬೋ; ಭಾರತ ಹಾಗೂ ಶ್ರೀಲಂಕಾ ಇಲೆವೆನ್ ನಡುವೆ ಇಂದಿಲ್ಲಿ ಮುಗಿದ ಮೊದಲ ಅಭ್ಯಾಸ ಪಂದ್ಯದಲ್ಲಿ ಶ್ರೀಲಂಕಾ ಇಲೆವೆನ್ ಅಚ್ಛರಿಯ ರೀತಿಯಲ್ಲಿ ಭಾರತಕ್ಕೆ ಡಿಕ್ಲೇರ್ ನೀಡಿ ಪೇಚಿಗೆ ಸಿಲುಕಿತು ಅಲ್ಲದೇ ಡ್ರಾ ಆಗುವ ಪಂದ್ಯವನ್ನು ಸೋಲಬೇಕಾಯಿತು.
ಕೇವಲ ೬ ರನ್‌ಗಳ ಇನ್ನಿಂಗ್ಸ್ ಮುನ್ನಡೆಯಿಂದ ( ಅದೂ ಭಾರತ ತನ್ನ ಮೊದಲ ಸರದಿಯನ್ನು ಡಿಕ್ಲೇರ್ ನೀಡಿದ್ದಕ್ಕೆ) ಶ್ರೀಲಂಕಾ ಇಲೆವೆನ್ ೨ ನೇ ಸರದಿಯಲ್ಲಿ ೬ ವಿಕೆಟ್‌ಗೆ ೨೦೦ ರನ್ ಗಳಿಸಿದ್ದಾಗ ಭಾರತಕ್ಕೆ ಡಿಕ್ಲೇರ್ ನೀಡಿ ತಪ್ಪು ಮಾಡಿತು. ಅದು ಆಗ ಪಂದ್ಯದಲ್ಲಿ ಇನ್ನು ಸುಮಾರು ೫೦ ಕ್ಕೂ ಹೆಚ್ಚು ಓವರುಗಳು ಬಾಕಿ ಇದ್ದಾಗ ಡಿಕ್ಲೇರ್ ಎಂಬ ಕೆಟ್ಟ ನಿರ್ಧಾರ ಮಾಡಿ ಪಂದ್ಯ ಮೂರೇ ದಿನದಲ್ಲಿ ಪಂದ್ಯ ಸೋತಿತು.
ಸಿರಾಜ್ ಬಿರುಸಿನ ಬ್ಯಾಟಿಂಗ್ ಕೂಡ ಕಾರಣ: ಮೊಹ್ಮದ್ ಶಿರಾಜ್ ಕೊನೆಯಲ್ಲಿ ಕೇವಲ ೧೫ ಎಸೆತಗಳಲ್ಲಿ ೪ ಸಿಕ್ಸರ್ ೧ ಬೌಂಡರಿ ನೆರವಿನಿಂದ ೩೨ ರನ್ ಸಿಡಿಸಿದ್ದು ಕೂಡ ತಂಡದ ಗೆಲುವಿಗೆ ಕಾರಣವಾಯಿತು.


