ನ್ಯೂಯಾರ್ಕ್: ಹೆಚ್ಚುವರಿ ಸಮಯದಲ್ಲಿ ಪಂದ್ಯದ ೧೦೬ ನೇ ನಿಮಿಷದಲ್ಲಿ ಫೆರಾನ್ ಟೊರೇಸ್ ಗಳಿಸಿದ ಮಿಂಚಿನ ಗೋಲು ಸ್ಪೇನ್ ತಂಡವನ್ನು ಫೀಪಾ ವಿಶ್ವಕಪ ಫುಟ್‌ಬಾಲ್ ಪಂದ್ಯಾವಳಿಯಲ್ಲಿ ಚಾಂಪಿಯನ್ ತಂಡವನ್ನಾಗಿ ಮಾಡಿತು.
ಇಲ್ಲಿನ ನ್ಯೂ ಜೆರ್ಸಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಸ್ಪೇನ್ ತಂಡವು ಕಳೆದ ಬಾರಿಯ ಚಾಂಪಿಯನ್ ಅರ್ಜಿಂಟಿನಾ ತಂಡವನ್ನು ೧-೦ ಗೋಲಿನಿಂದ ಸೋಲಿಸಿ ಎರಡನೇ ಬಾರಿಗೆ ಫೀಪಾ ವಿಶ್ವಕಪ್ ಫುಟಬಾಲ್ ಪಂದ್ಯಾವಳಿಯ ಚಾಂಪಿಯನ್ ಆಗಿ ಹೊರ ಹೊಮ್ಮಿತು.
ಅರ್ಜಿಂಟಿನಾಗೆ ನಿರಾಸೆ: ಪ್ರಬಲ ಪೈಪೋಟಿ ನೀಡಿದ ಕಳೆದ ಬಾರಿಯ ಚಾಂಪಿಯನ್ ಮೆಸ್ಸಿ ನಾಯಕತ್ವದ ಅರ್ಜಿಂಟಿನಾ ಪಡೆ ಪಂದ್ಯಾವಳಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನ ನೀಡಿ ಫೈನಲ್‌ನಲ್ಲಿ ನಿರಾಸೆ ಅನುಭವಿಸಿತು.


