ಡಾರ್ವಿನ್(ಆಸ್ಟೆçÃಲಿಯಾ): ತಾನ್ಜೀದ್ ಹಸನ್ ತಮೀಮ್ ಅವರ ಸಮಯೋಚಿತ ಶತಕ ಹಾಗೂ ನಾಯಕ ನಜೀಮ್ ಉಲ್ ಹುಸೇನ್ ಶಾಂತೋ ಅವರ ಆಕರ್ಷಕ ಅರ್ಧ ಶತಕಗಳ ನೆರವಿನಿಂದ ಪ್ರವಾಸಿ ಬಾಂಗ್ಲಾದೇಶ ಕ್ರಿಕೆಟ್ ತಂಡವು ಆಸ್ಟೆçÃಲಿಯಾ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಂತ್ಯಕ್ಕೆ ಪಂದ್ಯದ ಮೇಲೆ ಹಿಡಿತ ಸಾಧಿಸಿದೆ.
ಇಲ್ಲಿನ ಮರಾರಾ ಕ್ರಿಕೆಟ್ ಮೈದಾನದಲ್ಲಿ ಎರಡನೇ ದಿನದಾಟ ಮುಗಿದಾಗ ಬಾಂಗ್ಲಾದೇಶ ತಂಡವು ೬ ವಿಕೆಟ್‌ಗೆ ೩೫೧ ರನ್‌ಗಳಿಸಿದ್ದು, ೧೫೩ ರನ್‌ಗಳ ಇನ್ನಿಂಗ್ಸ್ ಮುನ್ನಡೆ ಪಡೆದಿದೆ.
ಸ್ಕೋರ್ ವಿವರ
ಆಸ್ಟೆçÃಲಿಯಾ ಮೊದಲ ಇನ್ನಿಂಗ್ಸ್ ೧೯೮
ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್ ೬ ವಿಕೆಟ್‌ಗೆ ೩೫೧
ತಾನ್ಜೀದ್ ಹಸನ್ ತಮೀಮ್ ೧೦೧ (೧೯೭ ಎಸೆತ, ೮ ಬೌಂಡರಿ, ೧ ಸಿಕ್ಸರ್), ನಜೀಮ್ ಉಲ್ ಹುಸೇನ್ ಶಾಂತೋ ೮೪ ( ೧೨೬ ಎಸೆತ, ೭ ಬೌಂಡರಿ, ೧ ಸಿಕ್ಸರ್)
ಮೋಮಿನುಲ್ ಹಕ್ ೪೯ (೯೫ ಎಸೆತ, ೮ ಬೌಂಡರಿ)
ಮಿಚೆಲ್ ಸ್ಟಾರ್ಕ್ ೬೮ ಕ್ಕೆ ೨, ಜೋಶ್ ಹೆಜಲವುಡ್ ೬೮ ಕ್ಕೆ ೨)


