ಬೆಲ್‌ಪಾಸ್ಟ್(ಐರ್ಯಲೆಂಡ್): ಐರ್ಯಲೆಂಡ್ ವಿರುದ್ಧದ ಮೊದಲ ಟ್ವೆಂಟಿ-೨೦ ಪಂದ್ಯದಲ್ಲಿ ಕಿರಿಯ ಬ್ಯಾಟಿಂಗ್ ಸೆನ್ಸೆಸನ್ ವೈಭವ್ ಸೂರ್ಯವಂಶಿ ಅವರನ್ನು ಆಡುವ ಹನ್ನೊಂದರ ಬಳಗದಲ್ಲಿ ಆಯ್ಕೆ ಮಾಡದಿರುವ ಕುರಿತು ಇಂಗ್ಲೆAಡ್‌ನ ಮಾಜಿ ನಾಯಕ ಮೈಕಲ್ ವಾಘನ್ ಅಚ್ಛರಿ ವ್ಯಕ್ತಪಡಿಸಿದ್ದಾರೆ.
ಸದ್ಯ ವೈಭವ್ ಸೂರ್ಯವಂಶಿ ಟ್ವೆಂಟಿ-೨೦ ಕ್ರಿಕೆಟ್‌ನ ಅತ್ಯುತ್ತಮ ಆಟಗಾರ. ಅವರು ಭರ್ಜರಿ ಫಾರ್ಮ್ನಲ್ಲಿದ್ದಾರೆ. ಸೂರ್ಯವಂಶಿ ಅವರನ್ನು ಆಡಿಸದಿರಲು ನಿರ್ಧರಿಸುವ ಟೀಮ್ ಮ್ಯಾನೆಜ್‌ಮೆಂಟ್ ನಿರ್ಧಾರವನ್ನು ಮೈಕಲ್ ವಾಘನ್ ಟೀಕಿಸಿದ್ದಾರೆ.
ಐಪಿಎಲ್ ಸೇರಿದಂತೆ ಕಳೆದ ಕೆಲವು ತಿಂಗಳುಗಳಲ್ಲಿ ವೈಭವ್ ಸೂರ್ಯವಂಶಿ ಅತ್ಯುತ್ತಮ ಫಾರ್ಮ್ನಲ್ಲಿದ್ದಾರೆ ಎಂದು ವಾಘನ್ ಟ್ವೀಟ್ ಮಾಡಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದು, ಒಟ್ಟಾರೆ ಟೀಮ್ ಮ್ಯಾನೆಜ್‌ಮೆಂಟ್ ನಿರ್ಧಾರ ತಮಗೆ ಅಚ್ಛರಿ ಮೂಡಿಸಿದೆ ಎಂದಿದ್ದಾರೆ.


