ನವದೆಹಲಿ: ಕೆಲವು ತಿಂಗಳ ಹಿಂದೆಯಷ್ಟೇ ಹರಾರೆ ಸ್ಪೋಟ್ಸ್ ಕ್ಲಬ್ ಮೈದಾನದಲ್ಲಿ ವೈಭವ್ ಸೂರ್ಯವಂಶಿ ಹೀರೋ ಆಗಿ ಮೆರೆದಿದ್ದರು.
೧೯ ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಇದೇ ವೈಭವ್ ಸೂರ್ಯವಂಶಿ ಹರಾರೆಯಲ್ಲಿಯೇ ನಡೆದ ಇಂಗ್ಲೆAಡ್ ವಿರುದ್ಧದ ಫೈನಲ್‌ನಲ್ಲಿ ೮೦ ಎಸೆತಗಳಲ್ಲಿ ೧೭೫ ರನ್‌ಗಳಿಸಿ ಭಾರತ ಕಿರಿಯರ ತಂಡಕ್ಕೆ ೧೦೦ ರನ್‌ಗಳಿಂದ ಗೆಲುವು ತಂದುಕೊಟ್ಟಿದ್ದರಲ್ಲದೇ ವಿಶ್ವಕಪ್ ಕಿರೀಟವನ್ನು ತೊಡಿಸಿದ್ದರು.
ಈಗ ಅದೇ ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ವೈಭವ್ ಈ ಬಾರಿ ಜಿಂಬಾಬ್ವೆ ವಿರುದ್ಧದ ಕದನಕ್ಕೆ ರೆಡಿಯಾಗುತ್ತಿದ್ದಾರೆ. ಇದೇ ವ್ಯತ್ಯಾಸ ಎಂದರೆ ಈಗ ಭಾರತ ಸೀನಿಯರ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
ಕಳೆದ ಕೆಲವು ತಿಂಗಳುಗಳಲ್ಲಿ ಸಾಕಷ್ಟು ಏಳು-ಬೀಳು ಕಂಡಿರುವ ೧೫ ರ ಚಿಕ್ಕ ವಯಸ್ಸಿನ ಕ್ರಿಕೆಟಿಗ ಜಿಂಬಾಬ್ವೆ ವಿರುದ್ಧದ ಸರಣಿಯನ್ನು ಹೊಸ ಉತ್ಸಾಹದೊಂದಿಗೆ ಆರಂಭಿಸಲು ಮುಂದೆ ನೋಡುತ್ತಿದ್ದಾರೆ.


