Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜಯಮೃತ್ಯುಂಜಯ ಶ್ರೀ ವಿರುದ್ಧ ಆರೋಪ ಮಾಡಿದ ಮಹಿಳೆ ನಾಪತ್ತೆ

Advertisement
ಬೆಂಗಳೂರು: ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ವಿರುದ್ಧ ಬೆಂಗಳೂರು ಮೂಲದ ಮಹಿಳೆಯೊಬ್ಬರು ಲೈಂಗಿಕ ಕಿರುಕುಳ, ಬೆತ್ತಲೆ ವಿಡಿಯೋ ಕಾಲ್ ಮತ್ತು ಬ್ಲಾಕ್‌ಮೇಲ್ ಆರೋಪ ಮಾಡಿದ್ದರು. ಈ ಕುರಿತು ರಾಅಜ್ಯ ಮಹಿಳಾಅ ಆಯೋಗದಲ್ಲಿಯೂ ದೂರು ದಾಖಲಿಸಿದ್ದರು.

ಅತ್ತ ವಿಜಯಪುರದಲ್ಲಿ ಮಹಿಳೆ ಹಾಗೂ ನಾಲ್ವರ ವಿರುದ್ಧ ಹಣಕ್ಕೆ ಬೇಡಿಕೆ, ಹಲ್ಲೆ, ಬೆದರಿಕೆಯೊಡ್ದಿದ ಆರೋಪದಲ್ಲಿ ಜಯಮೃತ್ಯುಂಜಯ ಸ್ವಾಮೀಜಿ ಕೂಡ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಮಹಿಳೆ ಸೇರಿ ನಾಲ್ವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಈ ಬೆಳವಣಿಗೆ ನಡುವೆ ಮಹಿಳೆ ನಾಪತ್ತೆಯಾಗಿದ್ದಾರೆ.

ಸ್ವಾಮೀಜಿಯಿಂದ ಲೈಂಗಿಕ ದೌರ್ಜನ್ಯ ಆರೋಪ ಮಾಡಿ ಮಹಿಳಾ ಆಯೋಗಕ್ಕೆ ದೂರು ನೀಡಿದ್ದ ಮಹಿಳೆ ಇದೀಗ ನಾಪತ್ತೆಯಾಗಿದ್ದಾರೆ. ಮಹಿಳಾ ಆಯೋಗಕ್ಕೆ ದೂರು ನೀಡಿರುವ ಹಿನ್ನೆಲೆಯಲ್ಲಿ ಪೊಲೀಸರು, ಸಂತ್ರಸ್ತ ಮಹಿಳೆಯಿಂದ ಅಧಿಕೃತ ದೂರು ಪಡೆಯಲು ಮುಂದಾಗಿದ್ದಾರೆ. ಆದರೆ, ಮಹಿಳೆ ಮಾತ್ರ ನಿಗೂಢವಾಗಿ ನಾಪತ್ತೆಯಾಗಿದ್ದಾರೆ.

ಪೊಲೀಸರು ಎಷ್ಟೇ ಸಂಪರ್ಕಕ್ಕೆ ಯತ್ನ ಮಾಡಿದ್ರೂ ಸಂತ್ರಸ್ಥೆ ಸಂಪರ್ಕಕ್ಕೆ ಸಿಗುತ್ತಿಲ್ಲ. ಮಹಿಳೆಯ ಅಧಿಕೃತ ನಿವಾಸಕ್ಕೂ ಪೊಲೀಸರು ತೆರಳಿ ಪರಿಶೀಲನೆ ಮಾಡಿದರೂ ಸಹ ಪತ್ತೆಯಾಗಿಲ್ಲ. ಮಹಿಳೆ ಫೋನ್ ನಂಬರ್ ಕೂಡ ಸ್ವಿಚ್ಡ್ ಆಫ್ ಆಗಿದೆ. ಹೀಗಾಗಿ ಪೊಲೀಸರು ಸದ್ಯಕ್ಕೆ ಯಾವುದೇ ಪ್ರಕರಣ ದಾಖಲಿಸಿಕೊಂಡಿಲ್ಲ.

ಮಹಿಳೆ ಮಹಿಳಾ ಆಯೋಗಕ್ಕೆ ದೂರು ನೀಡುತ್ತಿದ್ದಂತೆಯೆ ಅತ್ತ ವಿಜಯಪುರ ಗ್ರಾಮೀಣ ಠಾಣೆಗೆ ಸ್ವಾಮೀಜಿ ಹನಿಟ್ರ್ಯಾಪ್ ದೂರು ದಾಖಲಿಸಿದ್ದಾರೆ. ಹಲ್ಲೆ ನಡೆಸಿ ನಂತರ ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡಲಾಗುತ್ತಿದೆ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ತಮ್ಮ ಶಿಷ್ಯ ಸಂತೋಷ ಮಂಜಣ್ಣಿ ಮೂಲಕ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮಹಿಳೆಯು ಅನಾಥಾಶ್ರಮ ನಡೆಸುತ್ತಿರುವುದಾಗಿ ಸುಳ್ಳು ಹೇಳಿ ಪರಿಚಯ ಮಾಡಿಕೊಂಡಿದ್ದಳು. ನನ್ನ ತೇಜೋವಧೆ ಮಾಡುವುದಾಗಿ ಬೆದರಿಸಿ 3 ಕೋಟಿ ರೂಪಾಯಿ ನೀಡುವಂತೆ ಬ್ಲಾಕ್‌ಮೇಲ್ ಮಾಡುತ್ತಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸಂಬಂಧ ಮಹಿಳೆ ಸೇರಿದಂತೆ ನಾಲ್ವರ ವಿರುದ್ಧ ಎಫ್​ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೊಕ್ಕಸ ತುಂಬುವ ಧಾವಂತದಲ್ಲಿ ಹಳಿ ತಪ್ಪಿತೇ ಹೆದ್ದಾರಿ ಪೊಲೀಸ್ ಕರ್ತವ್ಯ? ಮಲ್ಲಮ್ಮನ ಬೆಳವಡಿಯಲ್ಲಿ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಕೆಪಿಸಿಸಿ ಕಚೇರಿಯಲ್ಲಿಯೇ ಯೂಥ್ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಭಾರಿ ಹೊಡೆದಾಟಕಾಂಗ್ರೆಸ್ ಭವನಕ್ಕೆ ನಿವೇಶನ ನೀಡಿದರೆ ಉಗ್ರ ಹೋರಾಟ: ನವೀನ್ ಬಾಬುಸ್ವೀಡನ್ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದುಕೊಂಡ ಮೋದಿ : ಪ್ರಧಾನಿಗೆ 31 ಪ್ರಶಸ್ತಿ ಗರಿ SSLC - ಪಿಯುಸಿ ಮುಗಿಯುತ್ತಿದಂತೆ ನಾಪತ್ತೆಯಾಗುತ್ತಿರುವ ಬಾಲಕಿಯರು : 19 ಕೇಸ್ ಪತ್ತೆ ಪ್ಲೇ ಆಪ್: ೭ ತಂಡಗಳಿAದ ೩ ಸ್ಥಾನಗಳಿಗೆ ಪೈಪೋಟಿಕಾಲೇಜಿನಲ್ಲಿ ಕಳ್ಳತನ 24 ಗಂಟೆಯೊಳಗೆ ಪ್ರಕರಣ ಭೇದಿಸಿದ ಐಗಳಿ ಪೊಲೀಸರುಕೇರಳ ನೂತನ ಸಿಎಂಯಾಗಿ ವಿ.ಡಿ. ಸತೀಶನ್ ಪ್ರಮಾಣವಚನ ಸ್ವೀಕಾರಸುದೀರ್ಘ 8 ವರ್ಷಗಳ ಆಡಳಿತ ಪೂರ್ಣಗೊಳಿಸಿದ ಏಕೈಕ ವ್ಯಕ್ತಿಯಾದ ಸಿದ್ದರಾಮಯ್ಯ